3ನೇ ಹಂತದ "ಜನಾಕ್ರೋಶ ಯಾತ್ರೆ" 2 ದಿನ ಮುಂದೂಡಿಕೆ- ಎನ್. ರವಿಕುಮಾರ್


23-04-2025
Press Release

Download Document

23.04.2025

 

ಪ್ರಕಟಣೆಯ ಕೃಪೆಗಾಗಿ

 

3ನೇ ಹಂತದ "ಜನಾಕ್ರೋಶ ಯಾತ್ರೆ" 2 ದಿನ ಮುಂದೂಡಿಕೆ- ಎನ್. ರವಿಕುಮಾರ್

ಬೆಂಗಳೂರು: ಬಿಜೆಪಿ ವತಿಯಿಂದ ನಡೆಯುತ್ತಿರುವ 3ನೇ ಹಂತದ ಜನಾಕ್ರೋಶ ಯಾತ್ರೆಯನ್ನು 2 ದಿನಗಳ ಕಾಲ ಮುಂದೂಡಲಾಗಿದೆ ಎಂದು ವಿಧಾನಪರಿಷತ್ ವಿರೋಧ ಮುಖ್ಯಸಚೇತಕರು ಹಾಗೂ ಜನಾಕ್ರೋಶಯಾತ್ರೆಯ ರಾಜ್ಯ ಸಂಚಾಲಕ ಎನ್. ರವಿಕುಮಾರ್ ಅವರು ತಿಳಿಸಿದ್ದಾರೆ.

3ನೇ ಹಂತದ ಜನಾಕ್ರೋಶ ಯಾತ್ರೆಯು ನಾಳೆ(24.04.2025) ಬಳ್ಳಾರಿ ಹಾಗೂ ವಿಜಯನಗರ ಮತ್ತು ನಾಡಿದ್ದು(25.04.2025) ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ನಿಗದಿಯಾಗಿತ್ತು. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಕರ್ನಾಟಕದ ಮೂವರು ಸೇರಿದಂತೆ ದೇಶದ ವಿವಿಧ ರಾಜ್ಯಗಳ 28 ನಾಗರಿಕರು ಹತ್ಯೆಯಾಗಿದ್ದಾರೆ. ಅವರಿಗೆ ಸಂತಾಪ ಸೂಚಿಸುವ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ರಾಜ್ಯ ಸರ್ಕಾರದ ವಿರುದ್ಧ ನಡೆಯುತ್ತಿರುವ ಜನಾಕ್ರೋಶ ಯಾತ್ರೆಯನ್ನು ಎರಡು ದಿನಗಳ ಕಾಲ ಮುಂದೂಡಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಂಬರುವ ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ನಡೆಯುವ ಜನಾಕ್ರೋಶ ಯಾತ್ರೆಯ ದಿನಾಂಕವನ್ನು ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

(ಕರುಣಾಕರ ಖಾಸಲೆ)

ರಾಜ್ಯ ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please Login