ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತಿಯಲ್ಲಿ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರ ಸಮಾವೇಶ


02-04-2024
Press Release

Download Document

2-4-2024

 

ಪ್ರಕಟಣೆಯ ಕೃಪೆಗಾಗಿ

 

ಸುನಾಮಿಯಂತೆ ಗಟ್ಟಿಯಾದ ಮೋದಿಯವರ ಬೆಂಬಲದ ಗಾಳಿ..

ಬೆಂಗಳೂರು: ಬೆಂಗಳೂರು, ಕರ್ನಾಟಕದ ಎಲ್ಲೆಡೆ ನರೇಂದ್ರ ಮೋದಿಯವರ ಬೆಂಬಲದ ಗಾಳಿ ಸುನಾಮಿಯಂತೆ ಗಟ್ಟಿಯಾಗಿದೆ ಎಂದು ಬೆಂಗಳೂರು ದಕ್ಷಿಣ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ತಿಳಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಪ್ರಮುಖರ ಉಪಸ್ಥಿತಿಯಲ್ಲಿ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರ ಮೇಲ್ಪಟ್ಟವರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮೋದಿಜೀ ಅವರ ಸರಕಾರದ ಜನಪರ ಯೋಜನೆ, ಅನುದಾನಗಳ ವಿವರ ನೀಡಿದ್ದಲ್ಲದೆ, ಯುಪಿಎ- ಕಾಂಗ್ರೆಸ್ ಆಡಳಿತಾವಧಿಯಲ್ಲಿನ ಹಗರಗಣಗಳ ಕುರಿತು ಅವರು ಮಾಹಿತಿ ನೀಡಿದರು.

ಬೆಂಗಳೂರು ಗ್ರಾಮಾಂತರದ ಅಭ್ಯರ್ಥಿ ಡಾ. ಮಂಜುನಾಥ್ ಅವರು ಮಾತನಾಡಿ, ಮತ ಮೊದಲು ಸೇವೆ ನಿರಂತರ ಎಂದರು. ಭ್ರಷ್ಟಾಚಾರ, ಕಪ್ಪುಚುಕ್ಕೆ ಇಲ್ಲದ ಅಭಿವೃದ್ಧಿಪರ ಆಡಳಿತ ಮೋದಿಜೀ ಅವರದು ಎಂದು ಬೆಂಗಳೂರು ಕೇಂದ್ರದ ಅಭ್ಯರ್ಥಿ ಪಿ.ಸಿ.ಮೋಹನ್ ಅವರು ವಿವರಿಸಿದರು. ಮನೆಮನೆಗೆ ಕೇಂದ್ರದ ಸಾಧನೆಯ ವಿವರ ತಲುಪಿಸೋಣ ಎಂದು ಮನವಿ ಮಾಡಿದರು.

3ನೇ ಬಾರಿ ಬಿಜೆಪಿ ಗೆದ್ದು ಬಂದು ಅಭಿವೃದ್ಧಿಗೆ ವೇಗ ನೀಡುವ ಮತ್ತು ಜನರ ಬದುಕನ್ನು ಹಸನು ಮಾಡುವ ಯೋಚನೆ ಮತ್ತು ಸಂಕಲ್ಪ ಮೋದಿಜೀ ಅವರದು ಎಂದು ಬೆಂಗಳೂರು ಉತ್ತರದ ಅಭ್ಯರ್ಥಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ತಿಳಿಸಿದರು.

ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿ ಕೆ.ಸುಧಾಕರ್ ಅವರು ಮಾತನಾಡಿ, ರಾಜ್ಯದ್ದು ಕಿತ್ತುಕೊಳ್ಳುವ ಸರಕಾರ. ಕೇಂದ್ರದ ಬಿಜೆಪಿ ಸರಕಾರ ಮತ್ತು ಯಡಿಯೂರಪ್ಪ- ಬೊಮ್ಮಾಯಿಯವರ ನೇತೃತ್ವದ ಸರಕಾರ ಜನರಿಗೆ ಅಭಿವೃದ್ಧಿ ನೀಡುವ ಸರಕಾರ ಎಂದು ಮನದಟ್ಟು ಮಾಡಲು ಅವರು ಮನವಿ ಮಾಡಿದರು.

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please Login