Press Release


21-04-2024
Press Release

Download Document

21-4-2024

 

ಪ್ರಕಟಣೆಯ ಕೃಪೆಗಾಗಿ

 

 

ಹಣ ಹಂಚಿಕೆ, ಅಕ್ರಮ ಸಾಗಣೆಯಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು: ಅಶ್ವತ್ಥನಾರಾಯಣ ಟೀಕೆ

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಹಣ ಅಕ್ರಮ ಸಾಗಣೆಯಲ್ಲಿ ಕಾಂಗ್ರೆಸ್ ಪಕ್ಷ ನಿಸ್ಸೀಮತೆಯನ್ನು ಹೊಂದಿದೆ. ತಾನು ಕಳ್ಳ, ಪರರನ್ನು ನಂಬ ಎಂಬ ಸ್ಥಿತಿ ಕಾಂಗ್ರೆಸ್ಸಿಗರದು ಎಂದು ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥನಾರಾಯಣ ಅವರು ಆಕ್ಷೇಪಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಹಿಂದಿನಿಂದಲೇ ಹಣ, ಹೆಂಡ ಮತ್ತು ತೋಳ್ಬಲದ ಮೂಲಕ ಗೆಲುವು ಸಾಧಿಸುತ್ತಿತ್ತು. ಈಚಿನ ದಿನಗಳಲ್ಲಿ ಪಂಚರಾಜ್ಯಗಳ ಚುನಾವಣೆ ನಡೆದಾಗ ಕಾಂಗ್ರೆಸ್ ಮುಖಂಡರು ಗುತ್ತಿಗೆದಾರರಿಂದ ಹಣ ಸಂಗ್ರಹಿಸಿ ತೆಲಂಗಾಣ ಮತ್ತಿತರ ರಾಜ್ಯಗಳಲ್ಲಿ ಬಳಸಿಕೊಂಡಿದ್ದರು ಎಂದು ಅವರು ಆರೋಪಿಸಿದ್ದಾರೆ.

ಇವತ್ತು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದ ಸುಮಾರು 2 ಕೋಟಿ ಮೊತ್ತವನ್ನು ಮೈಸೂರು ಮತ್ತು ಮೈಸೂರು ಗ್ರಾಮಾಂತರದ ಚುನಾವಣಾ ಕಾರ್ಯಾಲಯ, ಚುನಾವಣಾ ವೆಚ್ಚಕ್ಕಾಗಿ ತೆಗೆದುಕೊಂಡು ಹೋಗಲಾಗುತ್ತಿತ್ತು. ಪಕ್ಷವು ಇದಕ್ಕೆ ಸಂಬಂಧಿಸಿ ಬ್ಯಾಂಕಿನಿಂದ ಹಣ ಡ್ರಾ ಮಾಡಿದ ಎಲ್ಲ ದಾಖಲೆಗಳನ್ನು ಹೊಂದಿದೆ. ಕಾಂಗ್ರೆಸ್ಸಿನ ಸಚಿವ ಕೃಷ್ಣಬೈರೇಗೌಡರ ಕುಮ್ಮಕ್ಕಿನಿಂದ ಈ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸರಕಾರಿ ಯಂತ್ರದ ದುರುಪಯೋಗದ ಮೂಲಕ ಕಾಂಗ್ರೆಸ್ ಪಕ್ಷವು ಹಣ ಅಕ್ರಮವಾಗಿ ಹಂಚಲು ಮುಂದಾಗಿದೆ. ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please Login