International Women's Day - Honoring women achievers


08-03-2025
Press Release

Download Document

8-3-2025

ಪ್ರಕಟಣೆಯ ಕೃಪೆಗಾಗಿ

 

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ’- ಸಾಧಕಿಯರಿಗೆ ಸನ್ಮಾನ

 

ಬೆಂಗಳೂರು: ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಏರ್ಪಡಿಸಿದ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಆರು ಮಂದಿ ಸಾಧಕಿಯರನ್ನು ಗುರುತಿಸಿ ಗೌರವಿಸಲಾಯಿತು.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಮತ್ತು ಇತರ ಗಣ್ಯರು ಸನ್ಮಾನ ನೆರವೇರಿಸಿದರು. ಶ್ರೀಮತಿ ರಜನಿ ಪೈ ಅವರು ಕಾರ್ಯಕ್ರಮ ನಿರ್ವಹಿಸಿದರು.

ಮಹಿಳಾ ಸಾಧಕಿ ಶ್ರೀಮತಿ ಸುಗುಣ ಬಾಲನರಸಿಂಹ ಇವರು ದಿನಗಳ ತರಬೇತಿ ಪಡೆದಿದ್ದು ಪ್ರಧಾನಮಂತ್ರಿಯ ಪಿಎಂಇಜಿಪಿ ಸ್ಕೀಮ್ ನಾಡಿಯಲ್ಲಿ ಪ್ರಮಾಣ ಪತ್ರವನ್ನು ಪಡೆದಿರುವ ಹೆಮ್ಮೆ ಇವರದ್ದಾಗಿದೆ. ಮತ್ತಷ್ಟು ಸಾಲ ರೂ.1,50,000 ದ ವರೆಗೂ ಬಹಳ ಸುಲಭವಾಗಿ ಬಡ್ಡಿ ರಹಿತ ವಾಗಿ ಪಡೆದುಕೊಂಡಿದ್ದಾರೆ ಇವರ ಸಾಲ ಹಿಂತಿರುಗಿಸುವ ಟ್ರ್ಯಾಕ್ ರೆಕಾರ್ಡ್ ಬಹಳ ಚೆನ್ನಾಗಿರುವುದರಿಂದ ಇವರು ಸರಿಸುಮಾರು 50 ಲಕ್ಷದವರೆಗೂ ಮುದ್ರಾ ಲೋನ್ ಪಡೆಯಲು ಸಂಪೂರ್ಣವಾಗಿ ಅರ್ಹರಾಗಿದ್ದಾರೆ. ಯಾವುದೇ ರೀತಿಯ ಸಹಾಯ ಮನೆಯಿಂದವವಾಗಲಿ, ಸ್ನೇಹಿತರಿಂದಾಗಲಿ ಪಡೆಯದೆ ತಮ್ಮ ಸ್ವಂತ ಕಾಲಿನ ಮೇಲೆ ತಾವೇ ನಿಲ್ಲಬೇಕು ಎನ್ನುವ ಇವರ ಛಲವನ್ನು ನಾವೆಲ್ಲರೂ ಮೆಚ್ಚಲೇಬೇಕಾಗಿದೆ ಎಂದು ಪರಿಚಯಿಸಲಾಯಿತು.

ಶ್ರೀಮತಿ ಬಬಿತಾ ಅವರು ಮತ್ತು ಅವರ ಮಹಿಳಾ ಸಾಧಕಿ. ಅವರು ಅವರದೇ ಆದ ಒಂದು ಸ್ವಸಹಾಯ ಸಂಘವನ್ನು ಚಾಲ್ತಿಗೆ ತಂದಿರುತ್ತಾರೆ. ತಮ್ಮ ಅಡುಗೆ ಮಾಡುವ ಕಲೆಯನ್ನು ಮನೆಮಟ್ಟಿಗೆ ಸೀಮಿತವಾಗಿ ಇಡದೆ ಚಟ್ನಿ ಪುಡಿ ಹಾಗೂ ಹಪ್ಪಳ ಸಂಡಿಗೆಯನ್ನು ಬೇರೆಯವರು ಆಸ್ವಾದಿಸಬೇಕೆಂದು ತಾವೇ ಸ್ವಂತವಾಗಿ ಉದ್ಯಮವನ್ನು ಶುರು ಮಾಡಿಕೊಂಡರು. ಪ್ರಧಾನಮಂತ್ರಿ ಅವರ ಮುದ್ರಾ ಲೋನ್ ಮುಖಾಂತರ ಮೊದಲು ಐವತ್ತು ಸಾವಿರವನ್ನು ಪಡೆದು ತಮ್ಮ ವ್ಯವಹಾರವನ್ನು ಮುಂದುವರಿಸಿದರು ಅದರ ಬಡ್ಡಿ ಯನ್ನು ತಪ್ಪದೇ ಸರಿಯಾದ ಸಮಯಕ್ಕೆ ಪಾವತಿಸಿದ್ದರಿಂದ ಅವರಿಗೆ ಬ್ಯಾಂಕ್ ನಿಂದಾಗಿ ಮತ್ತೆ ಒಂದು ಲಕ್ಷ ಮುದ್ರಾ ಲೋನ್ ಮುಖಾಂತರ ಹಣ ಸಂದಾಯವಾಗಿದೆ ಇದಲ್ಲದೆ ಮತ್ತೊಮ್ಮೆ ಬ್ಯಾಂಕ್ ಮ್ಯಾನೇಜರ್ ಇವರನ್ನು ಖುದ್ದಾಗಿ ಕರೆಸಿ ಮಾತನಾಡಿ ಮತ್ತೆ ಎರಡು ಲಕ್ಷದಂತೆ ಅವರಿಗೆ ಮುದ್ರಾ ಲೋನ್ ಮೂಲಕ ಎರಡು ಲಕ್ಷದಷ್ಟು ಹಣವನ್ನು ಇವರ ವ್ಯವಹಾರಕ್ಕೆ ಸಿಗುವ ಹಾಗೆ ಸಿದ್ಧ ಮಾಡಿಕೊಟ್ಟಿರುತ್ತಾರೆ

ಇದೇವೇಳೆ ಇತರ ಸಾಧಕಿಯರಾದ ಶ್ರೀಮತಿಯರಾದ ತಾರಾಮಣಿ ನವೀನ್, ಎಂ.ಸಂಗೀತಾ, ಪ್ರತಿಭಾದೇವಿ, ಚಿತ್ರಾ ಅವರನ್ನು ಸನ್ಮಾನ ಮಾಡಲಾಯಿತು.

 

 

 

 

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please लॉगिन