
16-4-2025
ಪ್ರಕಟಣೆಯ ಕೃಪೆಗಾಗಿ
ಸಿಎಂಗೇ ಸವಾಲು ಹಾಕಿದ ಛಲವಾದಿ ನಾರಾಯಣಸ್ವಾಮಿ
ಬೆಳಗಾವಿ: ಮಾನ್ಯ ಸಿದ್ದರಾಮಯ್ಯನವರೇ, ಬಾಬಾ ಸಾಹೇಬ ಅಂಬೇಡ್ಕರರನ್ನು ಸಾವರ್ಕರ್ ಸೋಲಿಸಿದ್ದಾಗಿ ಋಜುವಾತು ಪಡಿಸಿದರೆ ನನ್ನ ವಿಪಕ್ಷ ಸ್ಥಾನಕ್ಕೆ ಇವತ್ತೇ ರಾಜೀನಾಮೆ ಕೊಡುತ್ತೇನೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸವಾಲು ಹಾಕಿದರು.
ಇಲ್ಲಿ ಇಂದು ನಡೆದ ಜನಾಕ್ರೋಶ ಯಾತ್ರೆ ಸಭೆಯಲ್ಲಿ ಮಾತನಾಡಿದ ಅವರು, ಆ ಸುಳ್ಳನ್ನು ನೀವು ಸಾಬೀತು ಮಾಡದಿದ್ದರೆ ನೀವು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ಧರಾಗಿ ಎಂದು ಆಗ್ರಹಿಸಿದರು. ನಿಮಗೆ ವಯಸ್ಸೂ ಆಗಿದೆ. ಎಲ್ಲ ಪದವಿ ಅನುಭವಿಸಿದ್ದೀರಿ. ಇದಕ್ಕಿಂತ ಹೆಚ್ಚಿನ ಪದವಿ ನಿಮಗೆ ಕಾಂಗ್ರೆಸ್ಸಿನಲ್ಲಿ ಸಿಗಲಾರದು ಎಂದು ತಿಳಿಸಿದರು.
ನನಗೆ ಮೊದಲು ಆತ್ಮೀಯರಾಗಿದ್ದ ಸಿದ್ದರಾಮಯ್ಯನವರು ಈ ಹಿಂದೆ ಇಷ್ಟು ಸುಳ್ಳು ಹೇಳುತ್ತಿರಲಿಲ್ಲ; ಈಗ ಅವರನ್ನು ಪ್ರಶ್ನಿಸಿದರೆ ಹೇಗಾದರೂ ಮಾಡಿ ಅಧಿಕಾರದಲ್ಲಿ ಇರಬೇಕಲ್ಲಪ್ಪ; ಕಾಂಗ್ರೆಸ್‍ನವರು ಸುಳ್ಳು ಹೇಳದಿದ್ರೆ ಬಿಡ್ತಾರ ಎನ್ನುತ್ತಾರೆ ಎಂಬಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಬಾಬಾ ಸಾಹೇಬ ಅಂಬೇಡ್ಕರರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಸಾವರ್ಕರ್ ಎಂಬುದಾಗಿ ಬಾಬಾ ಸಾಹೇಬರೇ ಬರೆದಿದ್ದಾರೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಇದಕ್ಕಿಂತ ಅಪ್ಪಟ ಸುಳ್ಳು ಬೇರೇನಾದರೂ ಇದೆಯೇ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು. ಇದನ್ನು ಅವರಿಗೆ ಚೋಟಾ ಖರ್ಗೆ ಹೇಳಿಕೊಟ್ಟಿದ್ದಾಗಿ ಆರೋಪಿಸಿದರು. ಮೋಟಾ ಖರ್ಗೆ ಮೇಲಿದ್ದಾರೆ ಎಂದರು.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
To Write Comment Please लॉगिन