Prices of all daily necessities have increased in the state : Govinda Karajola Criticism


16-04-2025
Press Release

Download Document

16-4-2025

 

ಪ್ರಕಟಣೆಯ ಕೃಪೆಗಾಗಿ

 

ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿಗೆ ನಾಮಕಾವಾಸ್ತೆ ಅಧ್ಯಕ್ಷ: ಗೋವಿಂದ ಕಾರಜೋಳ

ಬೆಳಗಾವಿ: ಮಲ್ಲಿಕಾರ್ಜುನ ಖರ್ಗೆ ರವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ ಅವರಿಗೆ ಕವಡೆ ಕಿಮ್ಮತ್ತು ಇಲ್ಲ. ಯಾವ ಸಭೆ ಸಮಾರಂಭದಲ್ಲೂ ಅವರಿಗೆ ಕವಡೆ ಕಿಮ್ಮತ್ತು ಇಲ್ಲ, ಯಾವುದೇ ಸಭೆ ಸಮಾರಂಭದಲ್ಲಿ ಯಾವುದೇ ಸ್ಥಾನಮಾನ ಇರುವುದಿಲ್ಲ. ಖರ್ಗೆ ಅವರು ನಾಮಕವಾಸ್ತೆ ಅಧ್ಯಕ್ಷ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಜನಾಕ್ರೋಶ ಯಾತ್ರೆ’ ಸಂಬಂಧ ಇಂದು ಇಲ್ಲಿ ಏರ್ಪಡಿಸಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ಸರ್ವಾಧಿಕಾರಿಗಳು; ಅವರು ಹೇಳಿದ ಹಾಗೆ ಕಾಂಗ್ರೆಸ್ ಆಡಳಿತ ನಡೆಯುತ್ತಿದೆಯೇ ಹೊರತು ಖರ್ಗೆಯವರದ್ದಲ್ಲ ಎಂದು ವಿವರಿಸಿದರು.

 ಡಾ. ಬಾಬಾಸಾಹೇಬ ಅಂಬೇಡ್ಕರ್ ರವರು ಕರ್ನಾಟಕ್ಕೆ ಬಂದು 100 ವರ್ಷ ಆಗಿದೆ. ಆದರೆ ಬೆಳಗಾವಿಯಲ್ಲಿ ಮಹಾತ್ಮಗಾಂಧೀಜಿ ಬಂದುಹೋದುದಕ್ಕೆ ಕಾರ್ಯಕ್ರಮ ಮಾಡಿದರು. ಆದರೆ ಸಹೋದರಿ ಶಶಿಕಲಾ ಜೊಲ್ಲೆ ರವರು ಡಾ. ಬಾಬಾಸಾಹೇಬರು ಬೆಳಗಾವಿಗೆ ಬಂದುಹೋಗಿ 100 ವರ್ಷ ಆಗಿದೆ ಈ ಎರಡೂ ಸೇರಿ ಕಾರ್ಯಕ್ರಮ ಮಾಡಿ ಎಂದು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದರೆ ಯಾರ ಬಾಯಿಯಿಂದ ಶಬ್ದ ಬಂದಿಲ್ಲ ಎಂದು ಟೀಕಿಸಿದರು.

ದಲಿತ ವಿರೋಧಿ ಕಾಂಗ್ರೆಸ್ ಪಕ್ಷವು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಎರಡು ಬಾರಿ ಲೋಕಸಭೆಯ ಚುನಾವಣೆಯಲ್ಲಿ ಸೋಲಿಸಿದೆ ಎಂದು ದೂರಿದರು. ಬೆಲೆ ಏರಿಕೆ ಸಮಸ್ಯೆ, ಕಾಂಗ್ರೆಸಿನ ದುರಾಡಳಿತ ಮತ್ತು ಕೇಂದ್ರದ ವಿರುದ್ಧ ಕಾಂಗ್ರೆಸಿನ ಅಪಪ್ರಚಾರದ ಬಗ್ಗೆ ಜನಜಾಗೃತಿಯ ಹೋರಾಟವನ್ನು ತಾವೆಲ್ಲರೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

5 ಕೆಜಿ ಅಕ್ಕಿ ಕೊಡುವುದಾಗಿ ಸಿದ್ದರಾಮಯ್ಯ ರವರು ಹೇಳಿದರು; ಆದರೆ 5 ಕಿಲೋ ಅಕ್ಕಿ ಕೊಟ್ಟವರು ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ; ಅಕ್ಕಿಯ ಒಂದು ಚೀಲದ ಮೇಲೆ ಸಿದ್ದರಾಮಯ್ಯ ನವರ ಪೋಟೊ ಹಾಕಿಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.

ರಾಜ್ಯದಲ್ಲಿ ಎಲ್ಲ ದಿನಬಳಕೆ ವಸ್ತುಗಳ ದರ ಹೆಚ್ಚಾಗಿದೆ ಎಂದು ಟೀಕಿಸಿದರು. ಕಾಂಗ್ರೆಸ್ಸಿನವರು ದಲಿತರ ಹಣ 38 ಸಾವಿರ ಕೋಟಿ ರೂ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ; ಅವರನ್ನು ಕ್ಷಮಿಸಬಾರದು ಎಂದು ವಿನಂತಿಸಿದರು.

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please लॉगिन