
30-4-2025
ಪ್ರಕಟಣೆಯ ಕೃಪೆಗಾಗಿ
ಕೇಂದ್ರದ ನಿರ್ಧಾರ ಇಡೀ ದೇಶದ ಜನರಿಗೆ ಖುಷಿ ತಂದಿದೆ: ಎನ್.ರವಿಕುಮಾರ್
ಬೆಂಗಳೂರು: ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಸರಕಾರ ಜಾತಿ ಗಣತಿ ಮಾಡುತ್ತಿದೆ. ದೇಶದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ನಿರ್ಧಾರ ಮಾಡಲು ಮತ್ತು ಭವಿಷ್ಯದ ಅನೇಕ ನಿರ್ಧಾರಕ್ಕೆ ಇದು ಸಹಾಯಕ ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ವಿಶ್ಲೇಷಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಜಾತಿ ಗಣತಿ, ಜನಗಣತಿ ಕುರಿತ ಕೇಂದ್ರದ ನಿರ್ಧಾರವು ಇಡೀ ದೇಶದ ಜನರಿಗೆ ಖುಷಿ ತಂದಿದೆ. ಇದನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು. ವಿವಿಧ ಜಾತಿಗಳ ಪರಿಸ್ಥಿತಿ ತಿಳಿದುಕೊಳ್ಳಲು ಇದು ಸಹಾಯಕ. ಈ ನಿರ್ಧಾರವನ್ನು ಬಿಜೆಪಿ ಕರ್ನಾಟಕ ಘಟಕ ಸ್ವಾಗತಿಸುತ್ತದೆ ಎಂದು ಅವರು ಹೇಳಿದರು.
ಇವತ್ತು ಕೇಂದ್ರ ಸರಕಾರವು ಜಾತಿಗಣತಿ ಮಾಡಲು ನಿರ್ಧರಿಸಿದ್ದು ಟಿ.ವಿ.ಗಳಲ್ಲಿ ಬರುತ್ತಿದೆ. ಇದು ಕೇಂದ್ರದ ಸಂವಿಧಾನದತ್ತ ಅಧಿಕಾರ. ಹಿಂದೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೆಲವು ಪಕ್ಷಗಳು ಜಾತಿ ಸಮೀಕ್ಷೆ ನಡೆಸಿದ್ದವು ಎಂದು ಆಕ್ಷೇಪಿಸಿದರು.
ಕರ್ನಾಟಕದಲ್ಲಿ ಜಾತಿ ಗಣತಿ ನಡೆದಿರಲಿಲ್ಲ; ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸರ್ವೇ ಮಾಡಿದ್ದಾಗಿ ತಿಳಿಸಿದ್ದರು. ಅದೂ ಕೂಡ ಸರಿಯಾಗಿ ಮಾಡಿರಲಿಲ್ಲ. ಅನೇಕ ಸಮುದಾಯಗಳು ವಿರೋಧ ಮಾಡಿದ್ದವು ಎಂದು ಗಮನ ಸೆಳೆದರು. ಇನ್ನೂ ಹಲವು ಸಮುದಾಯಗಳು ತಮ್ಮ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇದ್ದರೂ ಅದನ್ನು ಸರಿಯಾಗಿ ತೋರಿಸಿಲ್ಲ; ಕಡಿಮೆ ಸಂಖ್ಯೆ ತೋರಿಸಿದ್ದಾಗಿ ಹೇಳಿವೆ ಎಂದು ವಿವರಿಸಿದರು.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
To Write Comment Please लॉगिन