Chalavadi Narayanaswamy demands Kharge to resign as AICC president


02-05-2025
Press Release

Download Document

2.5.2025

 

ಪ್ರಕಟಣೆಯ ಕೃಪೆಗಾಗಿ

 

ಖರ್ಗೆಯವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲು ಛಲವಾದಿ ನಾರಾಯಣಸ್ವಾಮಿ ಆಗ್ರಹ

ಬೆಂಗಳೂರು: ಹಿಂದೂ ಕಾರ್ಯಕರ್ತರು, ಆರೆಸ್ಸೆಸ್, ಬಿಜೆಪಿ ವಿರುದ್ಧ ಪ್ರಚೋದನಕಾರಿ ಮಾತನಾಡುತ್ತಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾನ್ಯ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.

ಬಿಜೆಪಿ ಕಾರ್ಯಾಲಯದ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಖರ್ಗೆಯವರು ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ, ಎಲ್ಲರಿಗೂ ನ್ಯಾಯಕೊಡಿ ಎಂದು ಹೇಳಬೇಕಿತ್ತು. ಅದನ್ನು ಬಿಟ್ಟು ಬಿಜೆಪಿ, ಆರ್‍ಎಸ್‍ಎಸ್ ಹಾಗೂ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಇಂತಹ ಪ್ರಚೋದನಾತ್ಮಕ ಮಾತನಾಡಿದ್ದನ್ನು ಖಂಡಿಸುತ್ತೇನೆ ಎಂದರು.

ಎಐಸಿಸಿ ಅಧ್ಯಕ್ಷರಾದ ಮಾನ್ಯ ಮಲ್ಲಿಕಾರ್ಜುನ ಖರ್ಗೆ ರವರು, ನಾವು ಮನಸ್ಸು ಮಾಡಿದರೆ ನೀವು ರಸ್ತೆಗಳಲ್ಲಿ ಓಡಾಡಲು ಆಗುವುದಿಲ್ಲ. ನಾವು ನಿಮ್ಮನ್ನು ಯಾವ ರೀತಿ ಹಿಡಿತಕ್ಕೆ ತರಬೇಕು ಎಂದು ತಿಳಿದಿದೆ ಎಂದು ಪ್ರಚೋದನಕಾರಿಯಾಗಿ ಭಾಷಣದಲ್ಲಿ ಹೇಳಿಕೆ ನೀಡುತ್ತಾರೆ. ಈ ರೀತಿ ಹೇಳಿಕೆ ನೀಡಿರುವ ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷ ಸ್ಥಾನಕ್ಕೆ ಯೋಗ್ಯರಿದ್ದಾರೆಯೇ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರವು ಒಂದು ಸಮುದಾಯದ ಜನರನ್ನು ಓಲೈಸುವ ಸುಲುವಾಗಿ ಆ ಸಮುದಾಯದ ಅಧಿಕಾರಿಗಳನ್ನು ಹೆಚ್ಚಾಗಿ ನೇಮಕ ಮಾಡುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ನವರು ಸಮುದಾಯ ಸಮುದಾಯಗಳಲ್ಲಿ ದ್ವೇಷವನ್ನು ಬೆಳೆಸುವಂತಹ ಮತ್ತು ಒಂದು ಸಮುದಾಯವನ್ನು ಓಲೈಸುವಂತಹ, ಅವರಿಗೆ ಸಹಕಾರಿಯಾಗಿ ಇರಬೇಕು ಎಂಬ ಕಾರಣಕ್ಕೆ ನೀವು ಅಧಿಕಾರಿಗಳನ್ನು ಪ್ರೆರೇಪಿಸುತ್ತಿರುವುದು ಸತ್ಯವೆಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ತಿಳಿಸಿದರು.

ಡಿಐಜಿ ನೇಮಕಕ್ಕೆ ಕೆಲ ಅಧಿಕಾರಿಗಳ ಹೆಸರು ಕೇಳಿ ಬರುತ್ತಿದೆ. ಅದರಲ್ಲಿ ಸಲೀಂ ಅವರ ಹೆಸರು ಕೂಡ ಬಂದಿದೆ. ಒಂದು ಸಮುದಾಯದ ಓಲೈಕೆ ಮಾಡಲು ಪೊಲೀಸ್ ಅಧಿಕಾರಿಯಾದ ಸಲೀಂ ಅವರನ್ನೇ ನೀವು ಡಿಐಜಿಯನ್ನಾಗಿ ನೇಮಕ ಮಾಡಿ. ಇದಕ್ಕೆ ನಾವು ಯಾರು ವಿರೋಧಿಸುವುದಿಲ್ಲ. ನಿಮ್ಮ ಅನಿಸಿಕೆ ಏನು ಎಂಬುದು ಒಂದು ಬಾರಿ ಪೂರ್ಣವಾಗಲಿ. ಈ ರಾಜ್ಯದಲ್ಲಿ ಇನ್ನೂ ಹೆಚ್ಚು ರಕ್ತಪಾತ ಮಾಡಬೇಕೆಂಬ ಉದ್ದೇಶ ಇದ್ದರೆ ನೀವು ಅವರನ್ನೇ ಡಿಐಜಿಯನ್ನಾಗಿ ಮಾಡಿ ಎಂದು ಅವರು ತಿಳಿಸಿದರು.

ನಮ್ಮ ಹಿಂದೂ ಕಾರ್ಯಕರ್ತರು ರಕ್ಷಣೆ ಮಾಡಿಕೊಳ್ಳುವ ಶಕ್ತಿ ಇದ್ದರೆ ನಾವು ರಕ್ಷಣೆ ಮಾಡಿಕೊಳ್ಳುತ್ತೀವಿ, ಇಲ್ಲವಾದರೆ ಏನಾಗುತ್ತದೆ ಎಂಬುದನ್ನು ನೋಡಿಬಿಡೋಣ ಎಂದು ಸವಾಲು ಹಾಕಿದರು. ಮುಖ್ಯಮಂತ್ರಿಗಳು ಹುಬ್ಬಳ್ಳಿ- ಧಾರವಾಡದ ಕಾರ್ಯಕ್ರಮದಲ್ಲಿ ದೇಶದ ಪ್ರಧಾನ ಮಂತ್ರಿಗಳನ್ನು ಇಚ್ಛಾನುಸಾರ ಟೀಕಿಸಿದ್ದಾರೆ. ರಾಜ್ಯದಲ್ಲಿ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣವಲ್ಲ. ಇದು ರಾಜ್ಯದ ವಿಷಯ ಅಕ್ಕಿ ಬೆಲೆ ಹೆಚ್ಚಾದರೆ, ಮದ್ಯದ ಬೆಲೆ ಹೆಚ್ಚಾದರೆ ಕೇಂದ್ರದ ಕಡ ಏಕೆ ಬೊಟ್ಟು ಮಾಡಿ ತೋರಿಸುತ್ತಿದ್ದೀರಿ ಎಂದು ಕೇಳಿದರು. ಬೆಲೆ ಏರಿಕೆ ಮಾಡುವುದು ರಾಜ್ಯ ಸರ್ಕಾರದ ನಿರ್ಧಾರ. ಮಂಗ ಬೆಣ್ಣೆಯನ್ನು ತಿಂದು ಮೇಕೆ ಮೂತಿಗೆ ಒರೆಸಿದ ಹಾಗೆ ನೀವು ಏಕೆ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡಿ ತೋರಿಸುತ್ತೀರಿ ಎಂದು ಆಕ್ಷೇಪಿಸಿದರು.

ಮಾನ್ಯ ಮುಖ್ಯಮಂತ್ರಿಗಳು ಮತ್ತೊಮ್ಮೆ ಹೇಳಿಕೆ ನೀಡುತ್ತಾರೆ ಮನಮೋಹನ್ ಸಿಂಗ್ ರವರ ಕಾಲದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಕಮ್ಮಿ ಇತ್ತು. ಪ್ರಸ್ತುತ ಚಿನ್ನ ಮತ್ತು ಬೆಳ್ಳಿಯ ಬೆಲೆ ಹೆಚ್ಚಾಗಿರುವುದಕ್ಕೆ ಮೋದಿಯವರು ಕಾರಣ, ಅಮೇರಿಕಾದಲ್ಲಿ ಡಾಲರ್ ಬೆಲೆ ಹೆಚ್ಚಾಗಿರುವುದಕ್ಕೆ ಮೋದಿಯವರು ಕಾರಣ ಎಂದು ಹೇಳುತ್ತೀರಿ. ನಿಮ್ಮ ಪತ್ನಿಯವರಿಗೆ ಅವರ ಅಣ್ಣ ಮೈಸೂರಿನಲ್ಲಿ 5 ಲಕ್ಷಕ್ಕೆ 3 ಎಕರೆ 20 ಗುಂಟೆ ಜಾಗವನ್ನು ತೆಗೆದುಕೊಂಡಿದ್ದರು. ಅದು ಹೇಗೆ ಆ ಜಾಗಕ್ಕೆ  62 ಕೋಟಿ ಬೆಲೆ ಹೇಳಿದ್ದೀರಿ? ಅಷ್ಟು ಹೆಚ್ಚಾಗಿರುವುದಕ್ಕೆ ಮೋದಿಜೀ ರವರು ಕಾರಣವೇ ಎಂದು ಪ್ರಶ್ನಿಸಿದರು.

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please लॉगिन