
17-4-2025
ಪ್ರಕಟಣೆಯ ಕೃಪೆಗಾಗಿ
ಬಾಗಲಕೋಟೆ ಜನಾಕ್ರೋಶ ಯಾತ್ರೆ- ಪ್ರಮುಖರ ಮಾತಿನ ಮುಖ್ಯಾಂಶ
ಮುಡಾ ಹಗರಣವು ಸಿದ್ದರಾಮಯ್ಯನವರ ತಲೆಗೆ ಸುತ್ತಿಕೊಳ್ಳಲಿದೆ. ಡಿಕೆ ಶಿವಕುಮಾರ್ ಇಡುವ ಟೈಂ ಬಾಂಬ್ ನವೆಂಬರ್, ಡಿಸೆಂಬರ್‍ನಲ್ಲಿ ಸ್ಫೋಟ ಆಗಿ ಈ ಸರಕಾರ ಮನೆಗೆ ಹೋಗಲಿದೆ.
ಮಿತಿ ಮೀರಿದ ಭ್ರಷ್ಟಾಚಾರ, ಮಿತಿ ಮೀರಿದ ದರ ಏರಿಕೆಯ ಕಾರಣಕ್ಕೆ ಜನರಲ್ಲಿ ಆಕ್ರೋಶ ಇದೆ. ಸಿದ್ದರಾಮಯ್ಯರನ್ನು ಮನೆಗೆ ಕಳಿಸಬೇಕೆಂದು ಹಾಗೂ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಜನರು ನಿರ್ಧರಿಸಿದ್ದಾರೆ.
-ಜಗದೀಶ ಶೆಟ್ಟರ್
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ
ಒಬ್ಬೊಬ್ಬರನ್ನೇ ಒಡೆಯುವ ಸರಕಾರ ಇದು. ಒಕ್ಕಲಿಗರು, ಲಿಂಗಾಯತರನ್ನು ಒಡೆದಿದ್ದಾರೆ. ನಮ್ಮ ಸರಕಾರ ಇಲ್ಲದಿದ್ದರೆ ಒಳ ಮೀಸಲಾತಿ ಘೋಷಣೆ ಆಗುತ್ತಿರಲಿಲ್ಲ. ಶೇ 40 ಕಮಿಷನ್ ಸರಕಾರ ಎಂದು ತಿಳಿಸಿ ಅಧಿಕಾರ ಕಸಿದುಕೊಂಡ ಕಾರಣ ನಮಗೆ ನಿಮ್ಮ ಮೇಲೆ ಆಕ್ರೋಶವಿದೆ. ದಲಿತರು ಸಿದ್ದರಾಮಯ್ಯನ ಸುಳ್ಳಿಗೆ ಹಳ್ಳಕ್ಕೆ ಬಿದ್ದವರು.
-ಛಲವಾದಿ ನಾರಾಯಣಸ್ವಾಮಿ
ವಿಧಾನಪರಿಷತ್ ವಿಪಕ್ಷ ನಾಯಕ
ಅಭಿವೃದ್ಧಿಯೇ ಇಲ್ಲದ, ಭ್ರಷ್ಟಾಚಾರದ ಸರಕಾರ ಇದು. ಹಗರಣಗಳ, ಬೆಲೆ ಏರಿಕೆ ಮೂಲಕ ಜನರಿಗೆ ಹೊರೆ ಆಗಿರುವ ಸರಕಾರ ಇದು. ಬಾಗಲಕೋಟೆ, ವಿಜಾಪುರ, ಉತ್ತರ ಕರ್ನಾಟಕದ ಜನತೆಗೆ ಮಹಾ ಮೋಸ ಮಾಡಿದವರು ಸಿದ್ದರಾಮಯ್ಯನವರು. ಯುಕೆಪಿಗೆ ದುಡ್ಡು ಕೊಡದ, ಕುರ್ಚಿಗೆ ಜೋತು ಬಿದ್ದ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕು.
-ಗೋವಿಂದ ಕಾರಜೋಳ
ಮಾಜಿ ಡಿಸಿಎಂ ಮತ್ತು ಸಂಸದ
ಈಗಿನ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ. ಭ್ರಷ್ಟಾಚಾರ ಹೆಚ್ಚಾಗಿದೆ. ಮುಖ್ಯಮಂತ್ರಿಗಳು ನೈತಿಕತೆ ಇದ್ದರೆ ಅವರು ರಾಜೀನಾಮೆ ಕೊಡಬೇಕಾಗಿತ್ತು.
-ಪಿ.ಸಿ.ಗದ್ದಿಗೌಡರ್, ಸಂಸದ
ಜಾತಿಗಣತಿ ವಿರುದ್ಧ ಚರ್ಚೆ ಇದೆ. ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ, ಕಮಿಷನ್ ಪ್ರಮಾಣ ಚರ್ಚೆ ಆಗುತ್ತಿದೆ. ಬೆಳಿಗ್ಗೆ ಎದ್ದರೆ ರೊಕ್ಕ ಅಂದ್ರೆ ಮನಿ, ರಾತ್ರಿ ಹನಿ ಟ್ರ್ಯಾಪ್ ಕುರಿತು ಚರ್ಚೆ ನಡೆಯುತ್ತಿದೆ. ಶಾಸಕರು ಅನುದಾನಕ್ಕಾಗಿ ಭಿಕ್ಷೆ ಬೇಡುವಂತಾಗಿದೆ. ಮುಖ್ಯಮಂತ್ರಿಗಳು ‘ನಾಳೆ ಬಾ’ ಎನ್ನುತ್ತಿದ್ದಾರೆ. ಜಾತಿ ಸಮೀಕ್ಷೆ ಮೂಲಕ ಪರಿಶಿಷ್ಟ ಜಾತಿ, ಪಂಗಡಗಳಿಗೆ ಅನ್ಯಾಯ ಮಾಡಲು ಮುಂದಾಗುತ್ತಿದ್ದಾರೆ. 2028ರಲ್ಲಿ ನಮ್ಮ ಸರಕಾರ ಬರಲಿದೆ.
-ಬಿ.ಶ್ರೀರಾಮುಲು, ಮಾಜಿ ಸಚಿವ
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
To Write Comment Please Login