Congress party is now behaving like China and Pakistan : Dr. Sudhakar Reddy's criticism


30-04-2025
Press Release

Download Document

30-4-2025

 

ಪ್ರಕಟಣೆಯ ಕೃಪೆಗಾಗಿ

 

ಚೀನಾ ಪಾಕಿಸ್ತಾನ್ ಕಾಂಗ್ರೆಸ್‍ನಂತೆ ವರ್ತನೆ- ಡಾ.ಸುಧಾಕರ್ ರೆಡ್ಡಿ ಟೀಕೆ

ಬೆಂಗಳೂರು: ಕಾಂಗ್ರೆಸ್ ಪಕ್ಷವು ಇದೀಗ ಚೀನಾ ಪಾಕಿಸ್ತಾನ್ ನಂತೆ ವರ್ತಿಸುತ್ತಿದೆ ಎಂದು ಬಿಜೆಪಿ ರಾಜ್ಯ ಸಹ-ಉಸ್ತುವಾರಿಗಳಾದ ಡಾ. ಸುಧಾಕರ್ ರೆಡ್ಡಿ ಅವರು ಟೀಕಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ "ಜಗನ್ನಾಥ ಭವನ"ದಲ್ಲಿ ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ನಾಯಕರು ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು. ದೇಶದ ಎಲ್ಲರೂ ಪ್ರಧಾನಿ, ಗೌರವಾನ್ವಿತ ರಾಷ್ಟ್ರಪತಿಗಳು ಮತ್ತು ರಕ್ಷಣಾ ಪಡೆಗಳ ಪರವಾಗಿ ನಿಲ್ಲಬೇಕು. ಅವರು ಭಯೋತ್ಪಾದನೆಗೆ ಸಮರ್ಥ ಉತ್ತರ ಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪೆಹಲ್ಗಾಮ್‍ನಲ್ಲಿ ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ ನಾವೆಲ್ಲರೂ ಪ್ರಧಾನಿ ನರೇಂದ್ರ ಮೋದಿಜೀ ಮತ್ತು ರಕ್ಷಣಾ ಪಡೆಗಳಿಗೆ ಬೆಂಬಲ ನೀಡಿ ಅವರ ಸ್ಥೈರ್ಯವನ್ನು ಹೆಚ್ಚಿಸಬೇಕಿದೆ ಎಂದು ಮನವಿ ಮಾಡಿದರು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಆರ್.ಬಿ.ತಿಮ್ಮಾಪುರ ಅವರು ತಪ್ಪು ಸಂದೇಶ ನೀಡುವಂಥ ಮಾತನಾಡಿದ್ದಾರೆ ಎಂದು ಟೀಕಿಸಿದರು. ಎಲ್ಲರೂ ಪಕ್ಷಭೇದ ಮರೆತು ಕೇಂದ್ರದ ನಾಯಕತ್ವ ಜೊತೆ ನಿಲ್ಲುವ ಅಗತ್ಯವಿದೆ ಎಂದು ಅವರು ವಿನಂತಿಸಿದರು.

ಕರ್ನಾಟಕದ ಕಾಂಗ್ರೆಸ್ ಸರಕಾರವು ಅಲ್ಪಸಂಖ್ಯಾತರ ಓಲೈಕೆಯ ರಾಜಕಾರಣ ಮಾಡುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಭಯೋತ್ಪಾದಕರ ದಾಳಿಯಿಂದ ಮೃತಪಟ್ಟವರಿಗೆ ಅವಮಾನ ಮಾಡುವ ಮಾದರಿಯಲ್ಲಿ ತಿಮ್ಮಾಪುರ ಅವರು ಮಾತನಾಡಿದ್ದು, ಅವರು ದೇಶದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please Login