Karnataka Congress' chanting of peace mantra is objectionable: Dheeraj Muniraju


07-05-2025
Press Release

Download Document

7.5.2025

 

ಪ್ರಕಟಣೆಯ ಕೃಪೆಗಾಗಿ

 

ಕರ್ನಾಟಕ ಕಾಂಗ್ರೆಸ್ಸಿನ ಶಾಂತಿ ಮಂತ್ರ ಜಪ ಆಕ್ಷೇಪಾರ್ಹ: ಧೀರಜ್ ಮುನಿರಾಜು

ಬೆಂಗಳೂರು: ಭಾರತದ ರಕ್ಷಣಾ ಪಡೆಗಳು ನಿನ್ನೆ ಅಪರೇಷನ್ ಸಿಂಧೂರ್ ನಡೆಸಿದ್ದು, ಇಂದು ಬೆಳಿಗ್ಗೆ ಕರ್ನಾಟಕ ಐಎನ್‍ಎಸ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮೂಲಕ ‘ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ’ ಎಂಬ ಮಂತ್ರವನ್ನು ಜಪಿಸಿದ್ದಾರೆ. ಇದು ಯಾವ ರೀತಿ ಶಾಂತಿ ಮಂತ್ರ? ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭಾರತವು ಪಾಕಿಸ್ತಾನದ ಉಗ್ರರ 9 ಅಡಗುತಾಣಗಳ ಮೇಲೆ ದಾಳಿ ಮಾಡಿದೆ. ಮರುದಿನ ಬೆಳಿಗ್ಗೆ ಶಾಂತಿ ಮಂತ್ರ ಜಪವನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇವರ ಮನಸ್ಥಿತಿ ಮತ್ತು ಓಲೈಕೆಯ ರಾಜಕಾರಣದ ಕುರಿತು ಕಾಂಗ್ರೆಸ್ ಪಕ್ಷ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಭಾರತ ಸರ್ಕಾರ ಪಹಲ್ಗಾಮ್ ದುರ್ಘಟನೆಗೆ ಪ್ರತೀಕಾರವಾಗಿ ಪ್ರಧಾನ ಮಂತ್ರಿಗಳು, ರಕ್ಷಣಾ ಸಚಿವರು, ಗೃಹ ಸಚಿವರ ನೇತೃತ್ವದಲ್ಲಿ 3 ರಕ್ಷಣಾ ಪಡೆಗಳು ಅಪರೇಷನ್ ಸಿಂಧೂರ್ ನಡೆಸಿವೆ. ದೇಶದ 26 ಜನರ ಸಾವಿಗೆ ಕಾರಣರಾದ 3 ಉಗ್ರರ ಸಂಘಟನೆಗಳ ಅಡಗುತಾಣಗಳ ಮೇಲೆ ನರೇಂದ್ರ ಮೋದಿಯವರು ತಿಳಿಸಿದಂತೆ ಈ ಭೂಪಟದಿಂದ ನಿಷ್ಕ್ರಿಯಗೊಳಿಸುವ ಕಾರ್ಯ ಮಾಡಲಾಗಿದೆ ಎಂದರು.

ರಾಷ್ಟ್ರೀಯತೆ ಮತ್ತು ದೇಶ ಮೊದಲು, ಪಕ್ಷ ಅದರ ನಂತರ ವ್ಯಕ್ತಿ ಎಂಬ ಬಿಜೆಪಿ ತತ್ವದ ಆಧಾರದ ಮೇಲೆ ನಾವು ನಮ್ಮ ದೇಶ ಕಾಯುತ್ತಿರುವ ಮತ್ತು ಜನರನ್ನು ರಕ್ಷಿಸುತ್ತಿರುವ ಸೈನಿಕರಿಗೆ ಶಕ್ತಿಯನ್ನು ತುಂಬಬೇಕಾಗಿದೆ. ಭಾರತ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಬೆಂಬಲವಿದೆ ಎಂದ ಅವರು, ದೇಶದ ಸೈನಿಕರ ಪರವಾಗಿ ನಾವೆಲ್ಲರೂ ನಮ್ಮ ಮನೆಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ಪಾರ್ಥನೆ ಮಾಡಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಲು ಮನವಿ ಮಾಡಿದರು.

ಕೇಂದ್ರ ಗೃಹ ಸಚಿವಾಲಯದ ಆದೇಶದಂತೆ ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ಹಲಸೂರಿನಲ್ಲಿ ನಾಗರಿಕ ರಕ್ಷಣೆ ಮತ್ತು ಮಾಕ್ ಡ್ರಿಲ್‍ನ ತರಬೇತಿಯನ್ನು ನಡೆಸಲಾಗುತ್ತಿದೆ. ಈ ತರಬೇತಿಯಲ್ಲಿ ಬಿಜೆಪಿ ಯುವ ಮೋರ್ಚಾ ಕರ್ನಾಟಕದ ವತಿಯಿಂದ 60 ಜನ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಬಿಜೆಪಿ ರಾಜ್ಯ ಯುವ ಮೋರ್ಚಾ ವತಿಯಿಂದ ಜಿಲ್ಲೆಗಳು, ತಾಲ್ಲೂಕುಗಳು, ಮಂಡಲಗಳಲ್ಲಿ ನಾಗರಿಕ ರಕ್ಷಣೆ ಮತ್ತು ಮಾಕ್ ಡ್ರಿಲ್ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು. ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂದೀಪ್ ರವಿ ಮತ್ತು  ಮಾಧ್ಯಮ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಬಿ. ನಾಗೇಶ್ ಉಪಸ್ಥಿತರಿದ್ದರು.

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please Login