
6-5-2025
ಪ್ರಕಟಣೆಯ ಕೃಪೆಗಾಗಿ
ಎನ್‍ಐಎ ತನಿಖೆಗೆ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ
ಬೆಂಗಳೂರು: ಸುಹಾಸ್ ಶೆಟ್ಟಿ ಅವರ ಹತ್ಯೆಯ ಸೂಕ್ಷ್ಮತೆಯನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಆರೋಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪೊಲೀಸರು ನನ್ನ ಮಗನನ್ನು ಒಂದು ವಾರದಿಂದ ಹಿಂಬಾಲಿಸಿ ಆತ್ಮರಕ್ಷಣೆ ಮಾಡಿಕೊಳ್ಳಲು ಆಗದಷ್ಟು ಅವನನ್ನು ನಿಶಸ್ತ್ರಗೊಳಿಸಿದ್ದರು. ಅವನ ಹತ್ಯೆ ಮಾಡಿದವರಿಗೆ ಅವನ ಚಲನವಲನಗಳನ್ನು ಇಲಾಖೆ ಮೂಲಕ ರವಾನೆ ಆಗಿತ್ತೆಂದು ಮೃತರ ತಾಯಿ ಹೇಳಿದ್ದಾರೆ ಎಂದು ವಿವರಿಸಿದರು.
ಈ ಹಿನ್ನೆಲೆಯಲ್ಲಿ ಘಟನೆಯ ಎನ್‍ಐಎ ತನಿಖೆಗೆ ಆಗ್ರಹಿಸುತ್ತಿರುವುದಾಗಿ ಅವರು ತಿಳಿಸಿದರು. ಅಪರಾಧಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಕಾನೂನು ಚೌಕಟ್ಟಿಗೆ ತರಲು ಸಾಧ್ಯ ಎಂಬುದು ನಮ್ಮ ಭಾವನೆ ಎಂದು ನುಡಿದರು. ಗೃಹ ಸಚಿವರು ಮತ್ತು ಉಸ್ತುವಾರಿ ಸಚಿವರು ಕನಿಷ್ಠ ಜನಪ್ರತಿನಿಧಿಗಳನ್ನು ಕರೆದು ಮಾತನಾಡಿಸುವ ಸೌಜನ್ಯವನ್ನೂ ತೋರಿಸಿಲ್ಲ ಎಂದು ಆಕ್ಷೇಪಿಸಿದರು. ಸ್ಪೀಕರ್, ಒಬ್ಬ ಕಾಂಗ್ರೆಸ್ ಶಾಸಕ, ಎಲ್ಲ ಇತರ ಶಾಸಕರನ್ನು ಕರೆದು ಮಾತನಾಡಿ, ಶಾಂತಿ- ಸುವ್ಯವಸ್ಥೆ ಕುರಿತು ಸಲಹೆ ಪಡೆದಿಲ್ಲ ಎಂದು ದೂರಿದರು.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
To Write Comment Please Login