Legal battle against MK Hostel regarding Waqf notice - D.S. Arun


25-04-2025
Press Release

Download Document

25-4-2025

 

ಪ್ರಕಟಣೆಯ ಕೃಪೆಗಾಗಿ

 

ರಾಜ್ಯ ಸರಕಾರ ಕುಮ್ಮಕ್ಕು ಕೊಡುವುದನ್ನು ನಿಲ್ಲಿಸಲು ಆಗ್ರಹ

ಎಂ.ಕೆ.ಹಾಸ್ಟೆಲ್ ವಿರುದ್ಧ ವಕ್ಫ್ ನೋಟಿಸ್ ಸಂಬಂಧ ಕಾನೂನು ಹೋರಾಟ- ಡಿ.ಎಸ್.ಅರುಣ್

ಬೆಂಗಳೂರು: ಮೈಸೂರಿನ ಎಂ.ಕೆ.ಹಾಸ್ಟೆಲ್ ಜಾಗ ವಕ್ಫ್ ಮಂಡಳಿಗೆ ಸೇರಿದ್ದು ಎಂದು ಹಳೆಯ ದಿನಾಂಕವಿರುವ ನೋಟಿಸ್ ಅನ್ನು ಯಾರೂ ಇಲ್ಲದ ವೇಳೆ ಬಂದು ಅಂಟಿಸಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುÀವುದು ಎಂದು ವಿಧಾನಪರಿಷತ್ ಸದಸ್ಯ ಮತ್ತು ಬಿಜೆಪಿ ರಾಜ್ಯ ಕಾರ್ಯದರ್ಶಿ ಡಿ.ಎಸ್. ಅರುಣ್ ಅವರು ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ವಕ್ಫ್‍ನ ಒಂದು ಸಂಸ್ಥೆ ನಿನ್ನೆ ಇದನ್ನು ಅಂಟಿಸಿದೆ. ಏಪ್ರಿಲ್ 3ರ ದಿನಾಂಕ ನಮೂದಿಸಿದ್ದಾರೆ. ವಕ್ಫ್ ಕಾಯಿದೆ ರಾಜ್ಯಸಭೆಯಲ್ಲಿ ಏ. 4ರಂದು ಅನುಮೋದನೆ ಪಡೆದಿದೆ. ಇದನ್ನು ವ್ಯವಸ್ಥಿತವಾಗಿ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಸಾವಿರಾರು ಜನ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟ ಜಾಗ ಇದು. ಇದನ್ನು ವಕ್ಫ್ ಮಂಡಳಿ ನುಂಗುತ್ತಿರುವುದು ಖಂಡನೀಯ. ರಾಜ್ಯ ಸರಕಾರ ಇದಕ್ಕೆ ಕುಮ್ಮಕ್ಕು ಕೊಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಹೋರಾಟದ ಕುರಿತು ಟ್ರಸ್ಟಿನವರು, ಶಾಸಕರು, ಮಾಜಿ ಶಾಸಕರ ಜೊತೆ ಚರ್ಚೆ ಮಾಡಿರುವುದಾಗಿ ಹೇಳಿದರು. ಹಳೆಯ ದಿನಾಂಕ ನಮೂದಿಸಿ ನೋಟಿಸ್ ಕೊಟ್ಟದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.

4ರಂದು ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಕಾಯಿದೆ ಅನುಮೋದನೆ ಪಡೆದಿದೆ. 8ರಂದು ಕಾಯಿದೆ ಅನುಮೋದನೆ ಆಗಿದೆ. ಲೋಕಸಭೆಯಲ್ಲಿ ಮಂಡನೆ ಆದ 3ರಂದು ಎಂದು ದಿನಾಂಕ ನಮೂದಿಸಿದ್ದಾರೆ. ಮೇ 9ರೊಳಗೆ ಉತ್ತರ ನೀಡಲು ತಿಳಿಸಿದ್ದಾರೆ. ನೋಟಿಸನ್ನು ಕೈಯಲ್ಲಿ ಕೊಟ್ಟಿಲ್ಲ. ನಿನ್ನೆ ಬಂದು ಯಾರೂ ಇಲ್ಲದ ಸಂದರ್ಭದಲ್ಲಿ ಅಂಟಿಸಿ ಹೋದುದು ಎಷ್ಟು ಸರಿ ಎಂದು ಕೇಳಿದರು. ಅವರು ಹಳೆಯ ದಿನಾಂಕ ನಮೂದಿಸಿದ್ದು ವ್ಯವಸ್ಥಿತ ಷಡ್ಯಂತ್ರ ಎಂದು ಆರೋಪಿಸಿದರು.

ಹಾಸ್ಟೆಲ್ ಜಾಗ ಸುಮಾರು 3,300 ಚದರ ಅಡಿಯಷ್ಟಿದೆ. ಹಿಂದುಗಡೆ ಇರುವ ಲಿಂಗಾಯತರ ಜಾಗದ ಬಗ್ಗೆ ವಿವಾದ ಇತ್ತು. ಹಿಂದಿನ ಜಾಗ ಮತ್ತು ಹಾಸ್ಟೆಲ್ ಜಾಗ ಸೇರಿದೆ ಎಂದು ಏ.3ರ ತಾರೀಕಿನ ನೋಟಿಸ್ ಅಂಟಿಸಿದ್ದಾರೆ. ಬೆಂಗಳೂರಿನ ವಕ್ಫ್ ತನಿಖಾ ಅಧಿಕಾರಿಯ ನೋಟಿಸ್ ಇದಾಗಿದೆ ಎಂದು ತಿಳಿಸಿದರು.

ಮನ್ನಾರ್ ಕುಟುಂಬವು 1916ರಲ್ಲಿ ಇಲ್ಲಿ ಹಾಸ್ಟೆಲ್ ಆರಂಭಿಸಿದೆ. ಈ ಹಾಸ್ಟೆಲ್‍ನಲ್ಲಿ ನಾನು, ನನ್ನಣ್ಣ, ನನ್ನ ಸಂಬಂಧಿಕರು ಇಲ್ಲಿ ಇದ್ದು ವಿದ್ಯಾಭ್ಯಾಸ ಮಾಡಿದ್ದೆವು ಎಂದು ವಿವರಿಸಿದರು. ಸುಮಾರು 109 ವರ್ಷಗಳ ಹಳೆಯ ಕಟ್ಟಡವನ್ನು ಈಗ ತಮ್ಮದು ಎನ್ನುತ್ತಿದ್ದಾರೆ. ಕಾನೂನು 1954, 95, 2013ರಲ್ಲಿ ತಿದ್ದುಪಡಿಗಳಾಗಿವೆ. ಇದೀಗ ಎಂ.ಕೆ.ಹಾಸ್ಟೆಲನ್ನೂ ನುಂಗುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಆಕ್ಷೇಪಿಸಿದರು. ಇದನ್ನು ಖಂಡಿಸುತ್ತೇವೆ ಎಂದರು.

 

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please Login