Let the Congress party learn its lesson atleast now: C.K. Ramamurthy


10-05-2025
Press Release

Download Document

10-5-2025

 

ಪ್ರಕಟಣೆಯ ಕೃಪೆಗಾಗಿ

 

ಕಾಂಗ್ರೆಸ್ ಪಕ್ಷವು ಈಗಲಾದರೂ ಬುದ್ಧಿ ಕಲಿತುಕೊಳ್ಳಲಿ: ಸಿ.ಕೆ. ರಾಮಮೂರ್ತಿ

ಬೆಂಗಳೂರು: ಕಾಂಗ್ರೆಸ್ ಪಕ್ಷವು ನನ್ನ ಮೇಲೆ ಸುಳ್ಳು ಸುದ್ದಿಗಳನ್ನು ಹರಡುವುದನ್ನು ಬಿಟ್ಟು ಈಗಲಾದರೂ ಬುದ್ಧಿ ಕಲಿತುಕೊಳ್ಳಬೇಕು ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಸಿ.ಕೆ. ರಾಮಮೂರ್ತಿ ಅವರು ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸ್ಥಳೀಯ ಮಾಜಿ ಶಾಸಕರ ಸೋಲಿನ ಹತಾಶೆಯಿಂದ ನಾನು ಮಾಡದೇ ಇರುವ ತಪ್ಪನ್ನು ನಾನೇ ಮಾಡಿದ್ದೇನೆ ಎಂದು ಆ ಪಕ್ಷವು ಬಿಂಬಿಸುತ್ತಿದೆ ಎಂದು ಟೀಕಿಸಿದರು.

ಜಯನಗರದ 9ನೇ ಬಡಾವಣೆಯಲ್ಲಿ ಕನ್ನಡ ಸಂಘ ಸಂಸ್ಥೆಗಳು ನಡೆಸಿದ ಭಾರತೀಯ ಸೇನೆಯ ಕಾರ್ಯಾಚರಣೆಗೆ ಒಳ್ಳೆಯದಾಗಲಿ ಎಂದು ದೇವಸ್ಥಾನದಲ್ಲಿ ಪೂಜೆ ನೆರವೇರಿಸಲಾಗಿತ್ತು. ಅಲ್ಲದೆ ಸಿಹಿಯನ್ನು ಹಂಚುವ ಈ ಕಾರ್ಯಕ್ರಮದಲ್ಲಿ ನನ್ನ ಪಕ್ಕದ 3ನೇ ವ್ಯಕ್ತಿ ರಾಷ್ಟ್ರ ಧ್ವಜದಲ್ಲಿ ಕೈಯನ್ನು ಒರೆಸಿಕೊಂಡಿರುವ ವಿಡಿಯೋ ಚಿತ್ರೀಕರಣವನ್ನು ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪಕ್ಷವು ಹಂಚಿಕೊಂಡಿದೆ. ಈ ಮೂಲಕ ಸಿ.ಕೆ. ರಾಮಮೂರ್ತಿ ಯವರಿಂದ ರಾಷ್ಟ್ರಧ್ವಜಕ್ಕೆ ಅವಮಾನ ಎಂದು ಸುಳ್ಳು ಸುದ್ದಿಯನ್ನು ಹರಡುತ್ತಿರುವುದು ಖಂಡನೀಯ ಎಂದು ಆಕ್ಷೇಪಿಸಿದರು.

ಯಾವ ವ್ಯಕ್ತಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾನೆ, ಅವನ ಮೇಲೆ ಈಗಾಗಲೇ ತಿಲಕ್‍ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ; ನನ್ನ ಮೇಲಲ್ಲ ಎಂದು ಸ್ಪಷ್ಟಪಡಿಸಿದರು. ಆದರೂ, ಕಾಂಗ್ರೆಸ್ ಪಕ್ಷವು ನನ್ನನ್ನು ಬಂಧಿಸಲು ಕ್ರಮಕೈಗೊಳ್ಳುವಂತೆ ಹೋರಾಟ ಮಾಡುತ್ತಿದೆ. ಇದರಿಂದ ನಿಜವಾದ ದೇಶದ್ರೋಹಿಗಳು ಯಾರು ಎಂದರೆ ಕಾಂಗ್ರೆಸ್ಸಿನ ಸಂಸ್ಕøತಿ ಮತ್ತು ಕಾಂಗ್ರೆಸ್ ಪಕ್ಷ ಎಂಬುದು ಸ್ಪಷ್ಟಗೊಳ್ಳುತ್ತದೆ ಎಂದು ಅವರು ವಿವರಿಸಿದರು.

ಜಯನಗರದ ಮೇಲಿನ ಕಾರ್ಯಕ್ರಮವು ಬಿಜೆಪಿ ಆಯೋಜಿಸಿದ್ದಲ್ಲ. ಕ್ಷೇತ್ರದ ಕನ್ನಡ ಪರ ಸಂಸ್ಥೆಗಳು ಮತ್ತು ಸಂಘಟನೆಗಳು ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದವು. ಒಬ್ಬ ಶಾಸಕನಾಗಿ ಕಾರ್ಯಕ್ರಮಕ್ಕೆ ಹೋಗುವುದು ನನ್ನ ಕರ್ತವ್ಯವಾಗಿತ್ತು. ಆದರೆ, ಜಯನಗರ ಕಾರ್ಯಕ್ರಮದಲ್ಲಿ ನಡೆದ ಘಟನೆಯಿಂದ ನನಗೆ ಬಹಳನೋವಾಗಿದೆ ಎಂದು ಅವರು ತಿಳಿಸಿದರು.

 

(ಕರುಣಾಕರ ಖಾಸಲೆ)

ರಾಜ್ಯ ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please Login