Press conference: Former Deputy Chief Minister and MP of the state Govinda Karajol, former Union Minister A. Narayanaswamy, State Spokesperson H. Venkatesh Dodderi, SC Morcha State Vice President Hoodi Manjunath


03-05-2025
Press Release

Download Document

3-5-2025

 

ಪ್ರಕಟಣೆಯ ಕೃಪೆಗಾಗಿ

 

       ಕಳೆದ ವರ್ಷ ಆಗಸ್ಟ್ 1ರಂದು ಸುಪ್ರೀಂಕೋರ್ಟ್ ತೀರ್ಪು ಬಂದ ತರುವಾಯ ಒಳ ಮೀಸಲಾತಿಯನ್ನು ಜಾರಿ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಲಭಿಸಿತು. 30 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಒಳ ಮೀಸಲಾತಿಯ ಸಮಸ್ಯೆಗೆ ಪರಿಹಾರ ಸಿಗುವಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ  ವಕಲಾತ್ತು ವಹಿಸಿ ವಾದಿಸಿದ್ದು ಐತಿಹಾಸಿಕ ಸಂದರ್ಭವಾಗಿದೆ.

             ಸುಪ್ರೀಂಕೋರ್ಟ್ ತೀರ್ಪಿನ ತರುವಾಯ ತುರ್ತು ಕ್ರಮವಹಿಸಿದ ಹರ್ಯಾಣ, ತೆಲಂಗಾಣ, ಆಂಧ್ರಪ್ರದೇಶ ಸರಕಾರಗಳು ಒಳಮೀಸಲಾತಿಯನ್ನು ಜಾರಿ ಮಾಡಿ ಅಭಿನಂದನೆಗೆ ಪಾತ್ರವಾಗಿವೆ. ಆದರೆ ಒಳ ಒತ್ತಡದಿಂದ ಬಳಲುತ್ತಿರುವ ಕರ್ನಾಟಕದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನಿಧಾನಗತಿ ಅನುಮಾನಾಸ್ಪದವಾಗಿದೆ. ಸಾಮಾಜಿಕ ನ್ಯಾಯದ. ಹರಿಕಾರ ಎಂಬಂತೆ ಬಿಂಬಿಸಿಕೊಳ್ಳುವ ಸಿದ್ಧರಾಮಯ್ಯನವರು ಉಳಿದ ರಾಜ್ಯಗಳ ಎದುರು ಹಿಂದೆ ಉಳಿದು ತಲೆ ತಗ್ಗಿಸುವಂತೆ ಮಾಡಿದ್ದಾರೆ. ಒಳ ಮೀಸಲಾತಿ ಹೋರಾಟಗಾರರ ಒತ್ತಡ ತಂದು ಪ್ರತಿ ಹಂತದಲ್ಲಿ ಕೆಲಸ ತೆಗೆಸಬೇಕಾದ ಪರಿಸ್ಥಿತಿಯಲ್ಲಿ ಕರ್ನಾಟಕ ಸರ್ಕಾರವಿದೆ.

             ಮೇ 5ರಿಂದ ಕರ್ನಾಟಕದಲ್ಲಿ ಒಳಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳ ಸರ್ವೇಕ್ಷಣೆ ಕಾರ್ಯ ಆರಂಭವಾಗುತ್ತಿದೆ.

             ನಿನ್ನೆ ನಮ್ಮ ನಿಯೋಗ ಆಯೋಗದ ಅಧ್ಯಕ್ಷರನ್ನು ಭೇಟಿಯಾಗಿ ಹಲವು ಸಮಸ್ಯೆ - ಸವಾಲುಗಳ ಬಗ್ಗೆ ಚರ್ಚಿಸಿದೆ.

             ಸರ್ವೇಕ್ಷಣೆ ಸಮರ್ಪಕವಾಗಿ ಆಗಲು, ಪರಿಶಿಷ್ಟ ಜಾತಿಗಳಲ್ಲಿ ವಿಶ್ವಾಸ ಮೂಡಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ಹೀಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಒಳ ಮೀಸಲಾತಿ ಜಾರಿ ಮಾಡುವ ದಿನಾಂಕವನ್ನು - ಉದಾಹರಣೆಗೆ ಜೂನ್ 10 - ಘೋಷಿಸಬೇಕೆಂದು ನಮ್ಮ ಅಗ್ರಹ.

             ಸರ್ವೇಕ್ಷಣೆ ಮೇ20 ರಂದು  ಮುಗಿಯಲಿದೆ. ತಂತ್ರಜ್ಞಾನ ಬಳಸಿ ಸರ್ವೇಕ್ಷಣೆ ಮಾಡುತ್ತಿರುವುದರಿಂದ ಕೆಲವೇ ದಿನಗಳಲ್ಲಿ ವರದಿ ಸಿದ್ಧವಾಗುತ್ತದೆ. ಹೀಗಾಗಿ ಸರ್ವೇಕ್ಷಣೆಯಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳುವಂತಾಗಲು ಸಿದ್ಧರಾಮಯ್ಯನವರು ಒಳ ಮೀಸಲಾತಿ ಕಾಯ್ದೆಯಾಗಿ ಜಾರಿಯಾಗುವ ದಿನಾಂಕವನ್ನು ಈಗಲೇ ಘೋಷಿಸಬೇಕೆಂದು ನಮ್ಮ ಅಗ್ರಹವಾಗಿದೆ.

             ಕಾಂತರಾಜು ಸಮಿತಿಯ ವರದಿಯನ್ನು ರಾಜ್ಯ ಸರ್ಕಾರ ಸಚಿವ ಸಂಪುಟದ ಮುಂದೆ ಮಂಡಿಸಿದೆ . ಕೆಲವು ಪ್ರಬಲ ಸಮುದಾಯಗಳ ಕಾಂಗ್ರೆಸ್ ನಾಯಕರು ವಿರೋಧಿಸಿದ್ದಾರೆ. ಆದರೆ ಸಚಿವ ಸಂಪುಟದಲ್ಲಿರುವ ಡಾ ಮಹದೇವಪ್ಪ, ಡಾ ಜಿ. ಪರಮೇಶ್ವರ್, ಪ್ರಿಯಾಂಕ ಖರ್ಗೆ, ಕೆ.ಹೆಚ್. ಮುನಿಯಪ್ಪ, ಆರ್.ಬಿ. ತಿಮ್ಮಾಪುರ ಕಾಂತರಾಜು ಸಮಿತಿಯ ವರದಿಯ ಪರಿಶಿಷ್ಟ ಜಾತಿಗಳ ದತ್ತಾಂಶಗಳ ಬಗ್ಗೆ ಸಚಿವ ಸಂಪುಟದ ಸಭೆಯಲ್ಲಾಗಲಿ, ಹೊರಗಾಗಲಿ ವಿರೋಧಿಸಿಲ್ಲ.  ಕಾಂತರಾಜು ಆಯೋಗ ಜಾತಿಗಣತಿ ಮಾತ್ರವಲ್ಲ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ  ಮಾಡಿದೆ. ಈಗ ಹೊರಬಂದಿರುವ ದತ್ತಾಂಶಗಳು ಪರಿಶಿಷ್ಟರ 101 ಜಾತಿಗಳ ಜನಸಂಖ್ಯೆ ಬಗ್ಗೆ ಏನನ್ನು ಹೇಳುತ್ತದೆ ? ಇದು ಬಹುತೇಕ ಸದಾಶಿವ ಆಯೋಗ, ಮಾಧುಸ್ವಾಮಿ ಸಮಿತಿಯ ವರದಿಯಲ್ಲಿನ ಅಂಕಿ - ಸಂಖ್ಯೆಯನ್ನೇ ದೃಡೀಕರಿಸಿವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.

             ಕಾಂತರಾಜು ವರದಿ ಬಗ್ಗೆ ಮಹದೇವಪ್ಪ, ಪರಮೇಶ್ವರ್, ಪ್ರಿಯಾಂಕ ಖರ್ಗೆ ಅವರದು ದ್ವಂದ್ವ ನಿಲುವು. ಅವರು ಒಪ್ಪುತ್ತಲೂ ಇಲ್ಲ, ನಿರಾಕರಿಸುತ್ತಲೂ ಇಲ್ಲ. ಹೀಗಾಗಿ ನಾಳೆ ನಾಗಮೋಹನ್ ದಾಸ್ ನೇತೃತ್ವದ ಸರ್ವೇಕ್ಷಣೆಯ ದತ್ತಾಂಶಗಳ ಸರ್ವೇಕ್ಷಣೆ ಬಗ್ಗೆಯೂ ಇವರ ದ್ವಂದ್ವ ನಿಲುವು ಮುಂದುವರಿಯುವ ಸಾಧ್ಯತೆ ಇದೆ. ಹಾಗಾಗಿ ಸಿದ್ಧರಾಮಯ್ಯನವರು ಸಮೀಕ್ಷೆ ಆರಂಭವಾಗುವ ಮೊದಲೇ ಒಳ ಮೀಸಲಾತಿ ಜಾರಿ ಮಾಡುವ ದಿನಾಂಕ ಘೋಷಿಸಬೇಕು. ಬದ್ಧತೆಯನ್ನು ತೋರಿಸಬೇಕೆಂದು ನಮ್ಮ ಸ್ಪಷ್ಟ ಆಗ್ರಹವಾಗಿದೆ. ಬಿಜೆಪಿ ರಾಜ್ಯ ಕಾರ್ಯಾಲಯ ಮಲ್ಲೇಶ್ವರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ, ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ರಾಜ್ಯ ವಕ್ತಾರ ಹೆಚ್. ವೆಂಕಟೇಶ್ ದೊಡ್ಡೇರಿ, ಎಸ್‍ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್ ಅವರು ಉಪಸ್ಥಿತರಿದ್ದರು.

 

(ಕರುಣಾಕರ ಖಾಸಲೆ)

ರಾಜ್ಯ ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please Login