Tughlaq government in the state: Nalin Kumar Kateel


09-04-2025
Press Release

Download Document

9-4-2025

 

ಪ್ರಕಟಣೆಯ ಕೃಪೆಗಾಗಿ

 

ರಾಜ್ಯದಲ್ಲಿ ತುಘಲಕ್ ಸರಕಾರ: ನಳಿನ್‍ಕುಮಾರ್ ಕಟೀಲ್

ಮಡಿಕೇರಿ: ರಾಜ್ಯದಲ್ಲಿ ಸಿದ್ರಾಮಣ್ಣನ ಸರಕಾರ ಇಲ್ಲ. ಈ ರಾಜ್ಯದಲ್ಲಿ ಜಿಹಾದಿಗಳ, ತುಘಲಕ್  ಸರಕಾರ ಇದೆ ಎಂದು ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಆರೋಪಿಸಿದ್ದಾರೆ.

ಬಿಜೆಪಿ ಜನಾಕ್ರೋಶ ಯಾತ್ರೆಯ ಮೂರನೇ ದಿನವಾದ ಇಂದು ಇಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಜನವಿರೋಧಿ ನೀತಿಯ ಸಿದ್ರಾಮಣ್ಣ ಸರಕಾರ ಪತನಕ್ಕಾಗಿ ಈ ಆಕ್ರೋಶ ಯಾತ್ರೆ ನಡೆದಿದೆ ಎಂದು ವಿವರಿಸಿದರು. ಒಂದು ಕಡೆಯಿಂದ ಹಿಂದೂ ಸಮಾಜದ ದಮನದ ನೀತಿ ನಡೆದಿದ್ದರೆ, ಇನ್ನೊಂದೆಡೆ ರಾಜ್ಯದಲ್ಲಿ ನಿರಂತರವಾಗಿ ಗೋಹತ್ಯೆಗಳು ನಡೆಯುತ್ತಿವೆ ಎಂದು ಟೀಕಿಸಿದರು.

ಬೆಳಗಾವಿಯ ಜೈನ ಮುನಿಯ ಹತ್ಯೆಯಿಂದ ಆರಂಭವಾದ ಹತ್ಯಾ ದಿನಗಳು ಮುಂದುವರೆದಿವೆ. ಸಿದ್ರಾಮಣ್ಣನ ಕಾಲದಲ್ಲಿ ನಿರಂತರವಾಗಿ ಹತ್ಯೆಗಳು ನಡೆಯುತ್ತಿವೆ ಎಂದು ಆಕ್ಷೇಪಿಸಿದರು. ಹಿಂದೂ ಮಠ ಮಂದಿರಗಳ ಮೇಲೆ ದಾಳಿ, ಹಿಂದೂ ಕಾರ್ಯಕರ್ತರ ಬಂಧನ ನಡೆಯುತ್ತಿದೆ ಎಂದು ದೂರಿದರು.

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please Login