
13.04.2025
ಪ್ರಕಟಣೆಯ ಕೃಪೆಗಾಗಿ
“ಕಾಂಗ್ರೆಸ್ ಒಂದು ಸುಡುವ ಮನೆ, ಎಚ್ಚರ!' - ಈ ಮಾತನ್ನು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಏಕೆ ಹೇಳಿದರು?-ಈ ವಿಷಯದ ಕುರಿತು ರಾಜ್ಯ ಬಿಜೆಪಿ ಎಲ್ಲ ಜಿಲ್ಲೆಗಳಲ್ಲಿ ಬಾಬಾಸಾಹೇಬರ ವಿಚಾರಯಾತ್ರೆ ನಡೆಸಿ ಜನಜಾಗೃತಿ ಉಂಟು ಮಾಡಲಿದೆ.
ಏಪ್ರಿಲ್ 14 ರಿಂದ ಏ. 27 ರವರೆಗೆ ಈ ವಿಚಾರ ಯಾತ್ರೆ ನೆಡೆಯಲಿದೆ.
ಈ ಯಾತ್ರೆಯಲ್ಲಿ ಬಾಬಾಸಾಹೇಬರಿಗೆ ಮಾಡಿದ ಅವಮಾನಗಳ ಜೊತೆಗೆ ಮೋದಿ ಸರ್ಕಾರ ಕೊಟ್ಟ ಗೌರವವನ್ನು ವಿಸ್ತಾರವಾಗಿ ಹೇಳಲಾಗುವುದು. ಈ ಯಾತ್ರೆ ನಾಳೆ ವಿಜಯಪುರದ ಪಕ್ಷದ ಕಛೇರಿಯಲ್ಲಿನ ಕಾರ್ಯಕ್ರಮದಲ್ಲಿ ಪಕ್ಷದ ಉಪಾಧ್ಯಕ್ಷರು, ಮಾಜಿ ಸಚಿವರಾದ ಎನ್. ಮಹೇಶ್ ಚಾಲನೆ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ತಿಳಿಸಿದ್ದಾರೆ
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
To Write Comment Please Login