ಶ್ರೀ. ಬಿ.ಬಿ.ಶಿವಪ್ಪ

ಶ್ರೀ ಬಿ.ಬಿ.ಶಿವಪ್ಪ

ಶಿವಪ್ಪ ಅವರು ಸೆಪ್ಟೆಂಬರ್ 27, 1929 ರಂದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ಜನಿಸಿದರು. ಅವರ ರಾಜಕೀಯ ಜೀವನವು ಕಾಂಗ್ರೆಸ್ಸಿನ ಕೆ.ಕಾಮರಾಜ್ ಮತ್ತು ಮೊರಾರ್ಜಿದೇಸಾಯಿಯವರ ಆರಂಭಿಕ ಒಡನಾಟದಿಂದ ಪ್ರಾರಂಭವಾಯಿತು.

ಬಿಜೆಪಿಗೆ ಸೇರಿದ ಶಿವಪ್ಪನವರು 1983ರಲ್ಲಿ .ಕೆ.ಸುಬ್ಬಯ್ಯನವರ ನಂತರ ಬಿಜೆಪಿ ಪಕ್ಷದ ಎರಡನೇ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು. 1984 ಅವಧಿಯಲ್ಲಿ, ಶಾಸಕಾಂಗದಿಂದ ವಿಧಾನಪರಿಷತ್ತಿಗೆ ಆಯ್ಕೆಯಾದರು ಮತ್ತು 1990 ರವರೆಗೆ ಸದನದ ಸದಸ್ಯರಾಗಿ ಮುಂದುವರೆದರು. ಬಿಜೆಪಿಯ ಅನುಭವಿ ಬಿ.ಬಿ. ಶಿವಪ್ಪನವರು ನಂತರ ಸಕಲೇಶಪುರದಿಂದ ಚುನಾವಣೆಗೆ ಸ್ಪರ್ಧಿಸಿದರು ಮತ್ತು 1994 ರಲ್ಲಿ ಮೊದಲ ಬಾರಿಗೆ ಆಯ್ಕೆಯಾದರು. ಅವರು 1999 ರಲ್ಲಿ ಮರು ಆಯ್ಕೆಯಾದರು ಮತ್ತು 2004 ರವರೆಗೆ ಸದಸ್ಯರಾಗಿ ಮುಂದುವರೆದರು.

88 ವರ್ಷದ ಶಿವಪ್ಪ ಅವರು ರಾಜ್ಯ ಬಿಜೆಪಿ ಘಟಕದ ಹಲವಾರು ಹಿರಿಯ ನಾಯಕರಿಗೆ ಮಾರ್ಗದರ್ಶಕರಾಗಿದ್ದರು ಮತ್ತು ಕರ್ನಾಟಕದಲ್ಲಿ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು. 1980 ದಶಕದಲ್ಲಿ ಮಾಜಿ ಪಕ್ಷದ ಅಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪನವರ ಉದಯಕ್ಕೂ ಮುನ್ನವೇ ರಾಜ್ಯದಲ್ಲಿ ಬಿಜೆಪಿ ಇನ್ನೂ ಉಗಮದ ಹಂತದಲ್ಲಿದ್ದಾಗ ಪಕ್ಷವನ್ನು ಕಟ್ಟಿ ಬೆಳೆಸಿದ ಕೀರ್ತಿ ಶಿವಪ್ಪನವರಿಗೆ ಸಲ್ಲುತ್ತದೆ.