ಶ್ರೀ. ಬಸವರಾಜ ಪಾಟೀಲ ಸೇಡಂ

ಬಸವರಾಜ ಪಾಟೀಲ್ ಸೇಡಂ

 

ಬಸವರಾಜ ಗಣಪತ ರಾವ್ ಪಾಟೀಲ್ ಸೇಡಂ (ಜನನ 10 ಫೆಬ್ರವರಿ 1944) ಒಬ್ಬ ಭಾರತೀಯ ಜನತಾ ಪಕ್ಷದ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಇವರು ಕಲಬುರಗಿಯಿಂದ ಲೋಕಸಭೆಯ ಸಂಸದರಾಗಿದ್ದರು ಮತ್ತು ಕರ್ನಾಟಕದಿಂದ ರಾಜ್ಯಸಭೆಯ ಸಂಸದರಾಗಿದ್ದರು. ಅವರು ಭಾರತ ವಿಕಾಸ ಸಂಗಮದ ಪೋಷಕರಾಗಿದ್ದಾರೆ ಮತ್ತು ಅವರು ತರ್ನಹಳ್ಳಿಯ ಸುಂದರ ಪರಿಸರದಲ್ಲಿ ಪ್ರಕೃತಿಯನ್ನು ಪ್ರೀತಿಸುವ ಕೃಷಿಕರ ಮಧ್ಯೆ ಬೆಳೆದಿದ್ದಾರೆ. ಆರಂಭಿಕ ಶಿಕ್ಷಣವನ್ನು ಗ್ರಾಮೀಣ ಪ್ರದೇಶದಲ್ಲಿ ಪೂರೈಸಿದ ಅವರು ವಿಜ್ಞಾನ ಪದವಿಯನ್ನು ಗಳಿಸಿದರು. ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ  ಆಕರ್ಷಿತರಾಗಿ ತಮ್ಮ ಪೂರ್ಣ ಸಮಯವನ್ನು ಸಂಘಟನೆಗೆ ಸಮರ್ಪಿಸುವುದರ ಮೂಲಕ ಅದರ ಪ್ರಚಾರಕರಾದರು.

 

ಸಾರ್ವಜನಿಕ ಸೇವೆ ಮತ್ತು ಸಾಮಾಜಿಕ ಚಟುವಟಿಕೆಗಳ ಮೈಲಿಗಲ್ಲುಗಳು

1974 ರಲ್ಲಿ ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನದ ಪೂಜ್ಯ ಶ್ರೀಮಡಿವಾಳಯ್ಯ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ, ಸೇಡಂ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂನ ಬ್ಯಾನರ್ ಡಿಯಲ್ಲಿ ಅನನ್ಯ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆಯನ್ನು ಪ್ರಾರಂಭಿಸಿದರು. ಇದರ ಅಡಿಯಲ್ಲಿ ಸಮಿತಿಯು ನರ್ಸರಿ ಶಾಲೆ, ಪ್ರೌಢಶಾಲೆಗಳು, ಜೂನಿಯರ್ ಕಾಲೇಜು, ಪ್ರಥಮ ದರ್ಜೆ ಕಾಲೇಜು, ಡಿಎಡ್ ಕಾಲೇಜು, ಕಾನೂನು ಕಾಲೇಜು, CBSE ಶಾಲೆ ಮತ್ತು ರಾಜ್ಯ ಬೋರ್ಡ್ ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಿತು. ಇದರೊಂದಿಗೆ ಸಮಿತಿಯು ಸಂಗೀತ ಶಾಲೆ, ಜಿಮ್ನಾಷಿಯಂ, ವೈದ್ಯಕೀಯ ಕೇಂದ್ರ, ಗೋಶಾಲಾ ಮತ್ತು ಇತರ ಸಂಸ್ಥೆಗಳನ್ನು ಪ್ರಾರಂಭಿಸಿತು. ಸುಮಾರು 400 ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹೊಂದಿರುವ ಶಿಕ್ಷಣ ಸಂಸ್ಥೆಯಲ್ಲಿ 7000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.

ಸಾಮಾಜಿಕ-ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಂದ ನಾವು "ಹಿಂದುಳಿದಪ್ರದೇಶ" ಎಂಬ ನಾಮಫಲಕವನ್ನು ಅಳಿಸಬೇಕಾಗಿದೆ ಮತ್ತು ಸಾರ್ವಜನಿಕರ ಸಕ್ರಿಯ ಸಹಭಾಗಿತ್ವದಿಂದ ಅಭಿವೃದ್ಧಿ ಚಟುವಟಿಕೆ ಅರಳಬೇಕೆಂಬುದು ಶ್ರೀ ಬಸವರಾಜ ಪಾಟೀಲ ಸೇಡಂ ಅವರ ವಿನಮ್ರ ಆಶಯ. ಅವರ ಅವಿರತ ಪ್ರಯತ್ನಗಳು ಫಲಿತಾಂಶಗಳನ್ನು ನೀಡಲು ಪ್ರಾರಂಭಿಸಿವೆ ಮತ್ತು ಸಂಸ್ಥೆಗಳು ಭಾಗದ ವಿದ್ಯಾಥಿಗಳಿಗೆ ವಂಚಿತವಾಗಿದ್ದ ವಿದ್ಯಾ (ಶಿಕ್ಷಣ) ವಿದ್ವತ್ (ಜ್ಞಾನ) ಮತ್ತುವಿದ್ಯುತ್ (ತೇಜಸ್ಸು)ಗಳ ದೊರಕಲು ಅನುವಾಗಿದೆ.

 

RSS ಕಾರ್ಯಕರ್ತನಾಗಿ

• RSS 1954 ರಲ್ಲಿಸ್ವಯಂಸೇವಕ

ಪ್ರಚಾರಕ್ – 1967 ರಿಂದ  73ರವರೆಗೆ ಬಿಹಾರ ಬುಡಕಟ್ಟು ಪ್ರದೇಶದಲ್ಲಿ ಸಂತಾಲ್ ರಗಣಜಿಲ್ಲೆಯಲ್ಲಿ.

ಗುಲ್ಬರ್ಗಾ ಜಿಲ್ಲೆಯಲ್ಲಿ ಕ್ಷಾಮ ಪರಿಹಾರ ಕಾರ್ಯದಲ್ಲಿ ಸೇವೆಸಲ್ಲಿಕೆ.

ಕ್ಷಾಮ ಪೀಡಿತ ಪ್ರದೇಶಗಳಲ್ಲಿ 40 ಆಹಾರ ವಿತರಣಾ ಕೇಂದ್ರಗಳ ಆಯೋಜನೆ.

 

ಪ್ರಶಸ್ತಿಮತ್ತುಗೌರವ

• 2007 ರಲ್ಲಿ ದೇವಸ್ಥಾನಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮೀಜಿ ಸುಯತೀಂದ್ರಪ್ರಶಸ್ತಿ

• 2009 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

2011 ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯ ಹೈದರಾಬಾದ್ ರ್ನಾಟಕ ಪ್ರದೇಶದ 4 ಜಿಲ್ಲೆಗಳಲ್ಲಿ ಅತ್ಯುತ್ತಮ ಸಮಾಜ ಸೇವೆಗಾಗಿ ಡಾಕ್ಟರೇಟ್  ಪ್ರಶಸ್ತಿ.

ಶ್ರೀ ಮುರುಘಾ ಮಠದಿಂದ ಉತ್ತಮ ಶಿಕ್ಷಣ ತಜ್ಞ ಪ್ರಶಸ್ತಿ, ಹುಬ್ಬಳ್ಳಿ 2012 ಜನವರಿಯಲ್ಲಿ.

 

ರಾಜಕೀಯಕ್ಷೇತ್ರದಲ್ಲಿ:

ಸದಸ್ಯಕರ್ನಾಟಕ ಶಾಸಕಾಂಗ ಸಲಹೆಗಾರ (ಶಿಕ್ಷಕರಕ್ಷೇತ್ರ) – 1990- 1996

ಉಪಾಧ್ಯಕ್ಷಬಿಜೆಪಿಕರ್ನಾಟಕ 1991-93

ಕಾರ್ಯದರ್ಶಿಬಿಜೆಪಿ 1993-96

ಸಂಸದ ಗುಲ್ಬರ್ಗ 1998-99

ರಾಷ್ಟ್ರೀಯ ಕಾರ್ಯದರ್ಶಿಬಿಜೆಪಿ ನವದೆಹಲಿ

ಸದಸ್ಯಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿ ಭಾರತ ಸರ್ಕಾರದ HRD ಸಚಿವಾಲಯ ಮಹಿಳಾ ಸಬಲೀಕರಣ ಸಮಿತಿ ಭಾರತ ಸರ್ಕಾರ

ಅಧ್ಯಕ್ಷರು : ಕರ್ನಾಟಕ ರಾಜ್ಯ ಬಿಜೆಪಿ 2000-2003

ಏಪ್ರಿಲ್ 2012 ರಿಂದ ಮಾರ್ಚ್ 2018 ರವರೆಗೆ ರಾಜ್ಯಸಭಾ ಸದಸ್ಯ