ಶ್ರೀ.ಎ.ಕೆ.ಸುಬ್ಬಯ್ಯ

ಶ್ರೀ ಅಜ್ಜಿಕುಟ್ಟೀರ ಕಾರಿಯಪ್ಪ ಸುಬ್ಬಯ್ಯ

ಶ್ರೀ ಅಜ್ಜಿಕುಟ್ಟೀರ ಕಾರಿಯಪ್ಪ ಸುಬ್ಬಯ್ಯ (9 ಆಗಸ್ಟ್ 1934 - 27 ಆಗಸ್ಟ್ 2019)

ಕರ್ನಾಟಕ ವಿಧಾನಪರಿಷತ್ತಿನ ವಿರೋಧಪಕ್ಷದ ನಾಯಕರಾಗಿದ್ದರು ಮತ್ತು ಭಾರತದಲ್ಲಿ ಕರ್ನಾಟಕ ರಾಜ್ಯದ ವಿಧಾನಪರಿಷತ್ ಗೆ ನಾಲ್ಕು ಬಾರಿ ಸದಸ್ಯರಾಗಿದ್ದರು. ಅವರು ಕರ್ನಾಟಕ ಹೈಕೋರ್ಟ್ನಲ್ಲಿ ವಕೀಲರಾಗಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದರು.

ಆರಂಭಿಕ ಜೀವನ

ವಿರಾಜಪೇಟೆ ಸಮೀಪದ ಹಳ್ಳಿಯಲ್ಲಿ ಜನಿಸಿದ ಸುಬ್ಬಯ್ಯ, ಚಿನ್ನವ್ವ ಮತ್ತು ಕರಿಯಪ್ಪ ದಂಪತಿಯ ಏಕೈಕ ಪುತ್ರ. ಸುಮಾರು ಏಳು ತಿಂಗಳ ಮಗುವಾಗಿದ್ದಾಗ ತನ್ನತಂದೆಯನ್ನು ಕಳೆದುಕೊಂಡ ಅವರು ತನ್ನ ತಾಯಿ ಮತ್ತು ಅಜ್ಜಿಯೊಂದಿಗೆ ಬೆಳೆದರು. 1943ರಲ್ಲಿ ಹರಿಹರ ಗ್ರಾಮದಲ್ಲಿ ಶಿಕ್ಷಣ ಆರಂಭಿಸಿದ ಅವರು, ಪ್ರೌಢಶಾಲೆಯನ್ನು ಟಿ.ಶೆಟ್ಟಿಗೇರಿಯಲ್ಲಿ ಮುಗಿಸಿದರು. ವಿಜ್ಞಾನದಲ್ಲಿ ಪದವಿ (ಬಿಎಸ್ಸಿ) ಪಡೆದ ಅವರು 1963 ರಲ್ಲಿ ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ (ಬಿಎಲ್) ಪದವಿಯನ್ನು ಪಡೆದರು ಮತ್ತು 1966 ರಲ್ಲಿ ಜನಸಂಘದಿಂದ ವಿಧಾನಪರಿಷತ್ ಗೆ ಮೊದಲ ಬಾರಿಗೆ ಆಯ್ಕೆಯಾದರು. 1975 ರಲ್ಲಿ ತುರ್ತುಪರಿಸ್ಥಿತಿಯನ್ನು ಘೋಷಿಸಿದಾಗ, ಕರ್ನಾಟಕದ ಮೊದಲ ರಾಜಕೀಯ ಕೈದಿ ಮತ್ತು ಬೆಂಗಳೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗುವ ಮೊದಲು ಒಟ್ಟು 18 ತಿಂಗಳುಗಳನ್ನು ವಿವಿಧ ಜೈಲುಗಳಲ್ಲಿ ಕಳೆದರು.

1980 ರಲ್ಲಿ ಭಾರತೀಯ ಜನತಾ ಪಕ್ಷದ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು. ಅವರ ನೇತೃತ್ವದಲ್ಲಿ, 1983 ಚುನಾವಣೆಯಲ್ಲಿ ಪಕ್ಷವು 18 ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿತುಹೊರಗಿನ ಬೆಂಬಲದೊಂದಿಗೆ ಶ್ರೀ ರಾಮಕೃಷ್ಣಹೆಗಡೆಯವರು ಕರ್ನಾಟಕದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ರಚನೆಮಾಡುವಾಗ, ರಚನಾ ಕಾರ್ಯದಲ್ಲಿ ಕಾರಿಯಪ್ಪನವರು ಸಹಭಾಗಿಯಾಗಿದ್ದರು.