ಶ್ರೀ ಜಗದೀಶ್ ಶೆಟ್ಟರ್

ಶ್ರೀ ಜಗದೀಶ್ ಶಿವಪ್ಪ ಶೆಟ್ಟರ್

 

ಶ್ರೀ ಜಗದೀಶ್ ಶಿವಪ್ಪ ಶೆಟ್ಟರ್ (ಜನನ 17 ಡಿಸೆಂಬರ್ 1955) ಭಾರತೀಯ ಜನತಾಪಕ್ಷ (ಬಿಜೆಪಿ) ಸೇರಿದ ಭಾರತೀಯ ರಾಜಕಾರಣಿಯಾಗಿದ್ದು, ಅವರು 2012 ರಿಂದ 2013 ರವರೆಗೆ ಕರ್ನಾಟಕದ 21 ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.

ಅವರು ತರುವಾಯ ಕರ್ನಾಟಕ ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಹಿಂದೆ ಅವರು 2008-2009 ಅವಧಿಯಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿದ್ದರು. 20 ಆಗಸ್ಟ್ 2019 ರಂದು ಅವರು ಬಿಜೆಪಿ ಸರ್ಕಾರದಲ್ಲಿ ಸಕ್ಕರೆ ಮತ್ತು ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಕ್ಯಾಬಿನೆಟ್ ಸಚಿವರಾಗಿ ಸೇರ್ಪಡೆಗೊಂಡರು2008 ರಲ್ಲಿ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿಜಯದ ನಂತರ, ಶೆಟ್ಟರ್ ರವರು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾದರು. ಆದಾಗ್ಯೂ, ಅವರು 2009 ರಲ್ಲಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಬಿಜೆಪಿ ಹೈಕಮಾಂಡ್ ಸೂಚನೆಯ ಮೇರೆಗೆ 12 ಜುಲೈ 2012 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.  2013ರವಿಧಾನಸಭೆಚುನಾವಣೆ ಮೇ 2013 ರಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಬಿಜೆಪಿ ಶೆಟ್ಟರ್ ರವರನ್ನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತು. ಆದರೆ ಪಕ್ಷದ ಸೋಲಿನ ಕಾರಣದಿಂದ 8 ಮೇ 2013 ರಂದು ರಾಜೀನಾಮೆ ಸಲ್ಲಿಸಿದರು.

ಶೆಟ್ಟರ್ ರವರು ಕರ್ನಾಟಕದ ಬಾಗಲಕೋಟೆ ಜಿಲ್ಲೆಯ (ಹಿಂದಿನ ಬಿಜಾಪುರ ಜಿಲ್ಲೆ) ಬಾದಾಮಿ ತಾಲೂಕಿನ ಕೆರೂರು ಗ್ರಾಮದಲ್ಲಿ 17 ಡಿಸೆಂಬರ್ 1955 ರಂದು ಜನಿಸಿದರು. ಇವರ ತಂದೆ ಶ್ರೀ. ಎಸ್.ಎಸ್.ಶೆಟ್ಟರ್ ಮತ್ತು ಅವರ ತಾಯಿ ಶ್ರೀಮತಿ. ಬಸವೇನಮ್ಮ. ಇವರ ತಂದೆ ಜನಸಂಘದ ಹಿರಿಯ ಕಾರ್ಯಕರ್ತ ಎಸ್.ಎಸ್.ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆಗೆ ಐದು ಬಾರಿ ಆಯ್ಕೆಯಾಗಿ ಹುಬ್ಬಳ್ಳಿ-ಧಾರವಾಡದ ಮೊದಲ ಜನಸಂಘದ ಮೇಯರ್ ಆಗಿದ್ದರು. ಅವರ ಚಿಕ್ಕಪ್ಪ ಸದಾಶಿವಶೆಟ್ಟರ್ ರವರು ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದ ದಕ್ಷಿಣ ಭಾರತದ ಮೊದಲ ಜನಸಂಘದ ನಾಯಕರಾಗಿದ್ದರು. ಅವರು 1967 ರಲ್ಲಿ ಹುಬ್ಬಳ್ಳಿ ನಗರದಿಂದ ಆಯ್ಕೆಯಾದರು. ಶೆಟ್ಟರ್ ಅವರು BCom ಮತ್ತು LLB ಪದವಿಗಳನ್ನು ಹೊಂದಿದ್ದಾರೆ ಮತ್ತು ಹುಬ್ಬಳ್ಳಿಯಲ್ಲಿ 20 ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.