ಎಫ್‍ಐಆರ್‍ನಲ್ಲಿ ಶಾಸಕರ ಹೆಸರು ಸೇರಿಸಿ- ಅಶೋಕ್ ಆಗ್ರಹ


04-04-2025
Press Release

Download Document

4-4-2025

 

ಪ್ರಕಟಣೆಯ ಕೃಪೆಗಾಗಿ

 

ಎಫ್‍ಐಆರ್‍ನಲ್ಲಿ ಶಾಸಕರ ಹೆಸರು ಸೇರಿಸಿ- ಅಶೋಕ್ ಆಗ್ರಹ

ಕೊಡಗಿನಲ್ಲಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲಿರುವ ವಿಜಯೇಂದ್ರ

 

ಬೆಂಗಳೂರು: ‘ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಡೆತ್‍ನೋಟಿನಲ್ಲಿ ಇರುವ ಎಲ್ಲರ ಹೆಸರನ್ನೂ ಎಫ್‍ಐಆರ್‍ನಲ್ಲಿ ಸೇರಿಸಬೇಕು’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಆಗ್ರಹಿಸಿದ್ದಾರೆ. ‘ನಾಳೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ  ಅವರು ಕೊಡಗಿಗೆ ಭೇಟಿ ಕೊಡಲಿದ್ದು, ನಾಳೆ ಅಲ್ಲಿ ಧರಣಿ ಮುಂದುವರೆಸಲಿದ್ದೇವೆ’ ಎಂದು ಪ್ರಕಟಿಸಿದ್ದಾರೆ.

ಅವರು ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಎಫ್‍ಐಆರ್‍ನಲ್ಲಿ ಒಂದೇ ಒಂದು ಹೆಸರನ್ನು ಬರೆದಿದ್ದಾರೆ. ಇನ್ನೂ ಎರಡು ಹೆಸರು ಸೇರಿಸಲು ಒತ್ತಾಯಿಸಿದ್ದೇವೆ ಎಂದು ತಿಳಿಸಿದರು. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರೆಯಲಿದೆ ಎಂದರು.

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ‘ಉದ್ದೇಶಪೂರ್ವಕವಾಗಿ ಶಾಸಕರಾದ ಪೊನ್ನಣ್ಣ, ಮಂಥರ್ ಗೌಡ ಇವರಿಬ್ಬರ ಹೆಸರನ್ನು ಎಫ್‍ಐಆರ್‍ನಲ್ಲಿ ಸೇರಿಸಿಲ್ಲ’ ಎಂದು ಆಕ್ಷೇಪಿಸಿದರು.

ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್, ಪಕ್ಷದ ಮುಖಂಡರು ಹಾಜರಿದ್ದರು. ನಾಳೆ ರಾಜ್ಯಾಧ್ಯಕ್ಷರು ಕೊಡಗಿನಲ್ಲಿ ಅಂತ್ಯಸಂಸ್ಕಾರದಲ್ಲಿ ಹಾಗೂ ಹೋರಾಟದಲ್ಲಿ ಪಾಲ್ಗೊಳ್ಳುವರು ಎಂದು ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ತಿಳಿಸಿದರು.

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please Login