ಕನ್ನಡಿಗರಿಗೆ ಅವಮಾನ- ತಾರಾ ಅನುರಾಧಾ


06-05-2025
Press Release

Download Document

6-5-2025

 

ಪ್ರಕಟಣೆಯ ಕೃಪೆಗಾಗಿ

 

ಕನ್ನಡಿಗರಿಗೆ ಅವಮಾನ- ತಾರಾ ಅನುರಾಧಾ

ಬೆಂಗಳೂರು: ಸೋನು ನಿಗಮ್ ಅವರು ಕನ್ನಡಿಗರ ಕೋರಿಕೆಗೆ ಅಪಮಾನ ಮಾಡಿದ್ದಾರೆ ಎಂದು ವಿಧಾನಪರಿಷತ್ ಮಾಜಿ ಸದಸ್ಯೆ ಶ್ರೀಮತಿ ತಾರಾ ಅನುರಾಧಾ ಅವರು ತಿಳಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೋನು ನಿಗಮ್ ಅವರು ಬೆಂಗಳೂರಿನಲ್ಲಿ ಕಾರ್ಯಕ್ರಮ ಕೊಡುವ ವೇಳೆ ಕನ್ನಡದ ಹಾಡನ್ನು ಹಾಡಿ ಎಂದಾಗ ಬೇರೆಬೇರೆ ರೀತಿ ಹೋಲಿಸಿ ಮಾತನಾಡಿದ್ದಾರೆ ಎಂದರು. ನಾನು ಒಬ್ಬ ಕನ್ನಡಿಗಳಾಗಿ ಈ ಘಟನೆಯನ್ನು ಖಂಡಿಸುವೆ ಎಂದು ತಿಳಿಸಿದರು.

ಹಿರಿಯರಾದ ಪಿ.ಬಿ.ಶ್ರೀನಿವಾಸ್, ಎಸ್,ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ ಅಮ್ಮ, ಸುಶೀಲಮ್ಮ- ಇವರೆಲ್ಲರೂ ಭಾರತದ ವಿವಿಧ ಭಾಷೆಗಳಲ್ಲಿ ಹಾಡು ಹಾಡಿದವರು. ಅವರು ಕರ್ನಾಟಕಕ್ಕೆ ಬಂದಾಗ ಕನ್ನಡ ಹಾಡನ್ನು ಹಾಡಿ ನಮಗೆ ಹತ್ತಿರವಾಗಿದ್ದರು ಎಂದು ನುಡಿದರು.

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please Login