ಮುಖ್ಯಮಂತ್ರಿಗಳ ವರ್ತನೆಗೆ ಕು.ಮಂಜುಳಾ ಖಂಡನೆ


28-04-2025
Press Release

Download Document

28-4-2025

 

ಪ್ರಕಟಣೆಯ ಕೃಪೆಗಾಗಿ

 

ಮುಖ್ಯಮಂತ್ರಿಗಳ ವರ್ತನೆಗೆ ಕು.ಮಂಜುಳಾ ಖಂಡನೆ

ಬೆಂಗಳೂರು: ಬೆಳಗಾವಿಯಲ್ಲಿ ಇಂದು ಮುಖ್ಯಮಂತ್ರಿಗಳ ವರ್ತನೆಯನ್ನು ಖಂಡಿಸುವುದಾಗಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು.ಮಂಜುಳಾ ಅವರು ತಿಳಿಸಿದ್ದಾರೆ.

ಬೇಸಿಗೆ ರಜೆ ಕಳೆಯಲು ಜಮ್ಮು- ಕಾಶ್ಮೀರದಲ್ಲಿ ಪ್ರವಾಸಕ್ಕೆ ತೆರಳಿದ್ದ 26 ಭಾರತೀಯರನ್ನು ನಿರ್ದಯವಾಗಿ ಹತ್ಯೆಗೈದ ಉಗ್ರರ ಕುರಿತು ರಾಜ್ಯದ ಮುಖ್ಯಮಂತ್ರಿಗಳು ಎಡೆಬಿಡಂಗಿ ಹೇಳಿಕೆ ಕೊಟ್ಟಿರುವುದರ ಬಗ್ಗೆ ಮಹಿಳಾ ಮೋರ್ಚಾದ ಬೆಳಗಾವಿ ನಗರ ಘಟಕವು ಪ್ರತಿಭಟನೆ ಮಾಡಿತ್ತು. ಇದರಿಂದ ಇರಿಟೇಟ್ ಆದ ಮುಖ್ಯಮಂತ್ರಿಗಳು ತುಂಬ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಖಂಡಿಸಿದ್ದಾರೆ.

ಒಬ್ಬ ಪೊಲೀಸ್ ಅಧಿಕಾರಿ ಮೇಲೆ ಕಪಾಳಮೋಕ್ಷ ಮಾಡಲು ಹೋಗಿದ್ದಾರೆ. ಈ ಒಂದು ಪ್ರತಿಭಟನೆಯನ್ನು ಸಹಿಸಲಾಗದ ಮತ್ತು ಅತಿ ದ್ವೇಷ ಭಾವನೆ ಹೊಂದಿದ ಮುಖ್ಯಮಂತ್ರಿಗಳ ವರ್ತನೆಯನ್ನು ಖಂಡಿಸುವುದಾಗಿ ಹೇಳಿದ್ದಾರೆ.

ರಾಜ್ಯದಲ್ಲಿ ನಮ್ಮ ಮೇಲ್ಮನೆ, ಕೆಳಮನೆಯ ಶಾಸಕರ ಮೇಲೆ ದುರುದ್ದೇಶದಿಂದ ಎಫ್‍ಐಆರ್ ದಾಖಲಿಸಲಾಗುತ್ತಿದೆ. ತಮ್ಮ ವಿರುದ್ಧ ಧ್ವನಿ ಎತ್ತಿದವರ ವಿರುದ್ಧ ಆಕ್ರೋಶದಿಂದ ನಡೆದುಕೊಳ್ಳುತ್ತಿರುವ ಮುಖ್ಯಮಂತ್ರಿಗಳ ಹೇಳಿಕೆಯನ್ನು ಉಗ್ರವಾಗಿ ಖಂಡಿಸಿದ್ದಾರೆ.

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please Login