
10-4-2025
ಪತ್ರಿಕಾ ಆಹ್ವಾನ
ಬೆಂಗಳೂರು: ಭೀಮ ಹೆಜ್ಜೆ 100ರ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆಯು 11.4.2025ರ ಶುಕ್ರವಾರ ಬೆಳಿಗ್ಗೆ 9.30 ಗಂಟೆಗೆ ವಿಧಾನಸೌಧದ ಅಂಬೇಡ್ಕರ್ ಪ್ರತಿಮೆ ಬಳಿ ನಡೆಯಲಿದೆ.
ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಶ್ರೀ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಕಾರಜೋಳ , ಕೇಂದ್ರದ ಮಾಜಿ ಸಚಿವರಾದ ಶ್ರೀ ಎ. ನಾರಾಯಣಸ್ವಾಮಿ , ಸಂಸದರಾದ ಶ್ರೀ ಪಿ.ಸಿ. ಮೋಹನ್, ರಾಜ್ಯ ಉಪಾಧ್ಯಕ್ಷರಾದ ಶ್ರೀ ಎನ್. ಮಹೇಶ್ , ಶಾಸಕರಾದ ಶ್ರೀ ಎಸ್. ರಘು , ಮಾಜಿ ಸಂಸದರಾದ ಶ್ರೀ ಎಸ್. ಮುನಿಸ್ವಾಮಿ , ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷರು ಮತ್ತು ಶಾಸಕರಾದ ಶ್ರೀ ಸಿಮೆಂಟ್ ಮಂಜುನಾಥ್ , ಬೆಂಗಳೂರಿನ ಶಾಸಕರುಗಳು, ವಿಧಾನಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರುಗಳು , ಭೀಮ ಹೆಜ್ಜೆ ರಾಜ್ಯ ಸಂಚಾಲಕರು ಮತ್ತು ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಹೇಂದ್ರ ಕೌತಾಳ ಮತ್ತು ಪಕ್ಷದ ಮುಖಂಡರುಗಳು ಉಪಸ್ಥಿತರಿರಲಿದ್ದಾರೆ.
ತಮ್ಮ ಪತ್ರಿಕೆಯ ವರದಿಗಾರರು, ಛಾಯಾಗ್ರಾಹಕರು ಮತ್ತು ಟಿ.ವಿ. ಮಾಧ್ಯಮಗಳ ವರದಿಗಾರರು ಈ ಸಂದರ್ಭದಲ್ಲಿ ಭಾಗವಹಿಸಲು ಕೋರಲಾಗಿದೆ.
(ಕರುಣಾಕರ ಖಾಸಲೆ)
ರಾಜ್ಯ ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
To Write Comment Please Login