ಪತ್ರಿಕಾ ಆಹ್ವಾನ 10-5-2025


10-05-2025
Press Release

10-5-2025

 

ಪತ್ರಿಕಾ ಆಹ್ವಾನ

 

ಬೆಂಗಳೂರು: ಪೆಹಲ್ಗಾಮ್ ದಾಳಿಗೆ ಪ್ರತಿಯಾಗಿ ನಮ್ಮ ಭಾರತೀಯ ಸೇನೆ ಆಪರೇಷನ್ ಸಿಂದೂರ ಮೂಲಕ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ಈ ಕಾರ್ಯ ಯಶಸ್ವಿಯಾಗಲೆಂದು ಪ್ರಾರ್ಥಿಸಿ ‘ರಾಷ್ಟ್ರರಕ್ಷಣೆಗಾಗಿ ನಾವೆಲ್ಲರೂ...’ ಎಂಬ ಘೋಷವಾಕ್ಯದಡಿ 11.5.2025ರ ಭಾನುವಾರ ಬೆಳಿಗ್ಗೆ 7.00 ಗಂಟೆಗೆ ಬೆಂಗಳೂರಿನ ವಿದ್ಯಾರಣ್ಯಪುರದ ಎನ್‍ಟಿಐ ಆಟದ ಮೈದಾನದಿಂದ ಸಹಕಾರ ನಗರದ ಗಣೇಶ ದೇವಸ್ಥಾನ ದವರೆಗೂ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ನಿವೃತ್ತ ಮಾರ್ಷಲ್ ರವರಾದ ಶ್ರೀ ಎಸ್.ಪಿ. ಸಿಂಗ್ , ಕೇಂದ್ರ ಸಚಿವರಾದ ಕು. ಶೋಭಾ ಕರಂದ್ಲಾಜೆ , ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ , ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀಮತಿ ಮಾಳವಿಕ ಅವಿನಾಶ್ , ಬಿಜೆಪಿ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಹೆಚ್.ಸಿ. ತಮ್ಮೇಶ್ ಗೌಡ , ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಶ್ರೀ ಎಸ್. ಹರೀಶ್  ಅವರು ಉಪಸ್ಥಿತರಿರಲಿದ್ದಾರೆ.

ತಮ್ಮ ಪತ್ರಿಕೆಯ ವರದಿಗಾರರು, ಛಾಯಾಗ್ರಾಹಕರು ಮತ್ತು ಟಿ.ವಿ. ಮಾಧ್ಯಮಗಳ ವರದಿಗಾರರು ಈ ಸಂದರ್ಭದಲ್ಲಿ ಭಾಗವಹಿಸಲು ಕೋರಲಾಗಿದೆ.

 

(ಕರುಣಾಕರ ಖಾಸಲೆ)

ರಾಜ್ಯ ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please Login