
05.05.2025
ಪೃಕಟಣೆಯ ಕೃಪೆಗಾಗಿ,
ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಶ್ರೀ ಎನ್ ರವಿಕುಮಾರ್ ಅವರು ಹುಬ್ಬಳ್ಳಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಟಿಯ ವಿವರ.
ಹುಬ್ಬಳ್ಳಿ- ಬಿಜೆಪಿ ವತಿಯಿಂದ ನಡೆಯುತ್ತಿರುವ ರಾಜ್ಯ ಕಾಂಗ್ರೇಸ್ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆಯ ಸಮಾರೋಪ ಸಮಾರಂಭವು ಇದೆ 2025 ಮೇ 11 ರಂದು ಸಂಜೆ 4 ಘಂಟೆಗೆ ಹುಬ್ಬಳ್ಳಿಯ ಮೂರು ಸಾವಿರ ಮಠದ ಮೈದಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ರಾಜ್ಯ ನಾಯಕರು ಭಾಗವಹಿಸಲಿದ್ದಾರೆ.
ಇದೇ ಮೇ 7 ರಂದು ಕೋಲಾರ, 8 ರಂದು ತುಮಕೂರು, ಚಿತ್ರದುರ್ಗ, 9 ರಂದು ಬಳ್ಳಾರಿ, ವಿಜಯನಗರ, 10 ರಂದು ಚಿಕ್ಕಾಬಳ್ಳಾಪುರದಲ್ಲಿ ಜನಾಕ್ರೋಶಯಾತ್ರೆ ನಡೆದು ಸಮಾರೋಪ ಹುಬ್ಬಳ್ಳಿಯಲ್ಲಿ ನಡೆಯಲಿದೆ.
ಇದು ಬೆಲೆ ಏರಿಕೆಯ, ಟ್ಯಾಕ್ಸ್ ವಿಧಿಸುವ ಸರ್ಕಾರ.
ಈ ರಾಜ್ಯ ಕಾಂಗ್ರೇಸ್ ಸರ್ಕಾರವು ಆಡಳಿತಕ್ಕೆ ಬಂದ ಮೇಲೆ ನಾವು ದಿನನಿತ್ಯ ಬಳಸುವ ಸುಮಾರು 50 ಕ್ಕಿಂತ ಹೆಚ್ಚು ವಸ್ತುಗಳ ಬೆಲೆ ಏರಿಕೆ ಮಾಡಿದೆ. ಜನನ ಪ್ರಮಾಣ ಪತ್ರದಿಂದ ಹಿಡಿದು ಮರಣ ಪ್ರಮಾಣ ಪತ್ರದವರೆಗೆ ದರ ಏರಿಕೆ ಮಾಡಿದ್ದಾರೆ. ಈ ಸರಕಾರ ಕಸವನ್ನು ಸಹ ಬಿಡದೇ ಎಲ್ಲದರ ಮೇಲೆ ಟ್ಯಾಕ್ಸ್ ವಿಧಿಸುತ್ತಿದ್ದಾರೆ. ಜನರಿಂದ ದುಡ್ದು ಸಂಗ್ರಹಣೆ ಮಾಡುತ್ತಿದೆ.
ನಾಡಿನ ರೈತರಿಗೆ ಅನ್ಯಾಯ ಮಾಡಿದ ಸರ್ಕಾರ.
ರೈತರಿಗೆ ನೀಡುವ ಸಬ್ಸಿಡಿಯನ್ನು ನೀಡದೆ, ಫಸಲ್ ಭೀಮಾ ಯೋಜನೆಯ 4 ಸಾವಿರ ರೂಪಾಯಿ ಸಹಾಯಧನ ಕಡಿತಗೊಳಿಸಿದರು, ರೈತರ ಮಕ್ಕಳ ಸ್ಕಾಲರ್ ಶಿಪ್ ಬಂದ್ ಮಾಡಿದರು, ರಸ ಗೊಬ್ಬರ ಬೆಲೆ ಹೆಚ್ಚಳ ಮಾಡಿದರು, ಹೊಲಗಳಿಗೆ ಹಾಕುವ ವಿದ್ಯುತ್ ಪರಿವರ್ತಕ ಗಳ ಬೆಲೆ ಹೆಚ್ಚಳ ಮಾಡಿ ಹೀಗೆ ಈ ಸರ್ಕಾರ ರಾಜ್ಯದ ರೈತರ ಬೆನ್ನು ಮೂಳೆಯನ್ನು ಮುರಿಯುತ್ತಿದೆ.
ದಲಿತ ಸಮುದಾಯಕ್ಕೆ ಘೋರ ಅನ್ಯಾಯ.
SCP/TSP ಯ ಸುಮಾರು 39 ಸಾವಿರ ಕೋಟಿ ರೂಪಾಯಿ ಅನುದಾನ ದುರ್ಬಳಕೆ ಮಾಡಿ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ರೂಪಾಯಿ ಹಗರಣ ಮಾಡಿದೆ. ಅವರ ಅಭಿವೃದ್ಧಿಗೆ ಯಾವುದೇ ಅನುದಾನ ಇಲ್ಲ.
ಮುಸ್ಲಿಂ ತುಷ್ಟಿಕರಣದ ಪರಾಕಷ್ಟೆ.
ಈ ರಾಜ್ಯ ಸರಕಾರ ಬಜೆಟ್ ನಲ್ಲಿ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿಗೆ ಅನುದಾನ ಹಾಗೂ ಸರಕಾರಿ ಕಾಮಗಾರಿಗಳಲ್ಲಿ ಶೇ. 4 ರಷ್ಟು ಮೀಸಲು, ಇಮಾಮ್ ಗಳಿಗೆ 6 ಸಾವಿರ ಸಹಾಯಧನ ನೀಡಿ, ಹೀಗೆ ಬಹುಸಂಖ್ಯಾತರಿಗೆ ಅನ್ಯಾಯ ಮಾಡಿದೆ.
ಹಿಂದೂ ಕಾರ್ಯಕರ್ತರ ಹತ್ಯೆ ಕಾಂಗ್ರೇಸ್ ಸರಕಾರದ ಪ್ರಾಯೋಜಕತ್ವ.
ರಾಜ್ಯದಲ್ಲಿ ನಡೆದ ನಮ್ಮ ಹಿಂದೂ ಕಾರ್ಯಕರ್ತರ ಮೇಲಿನ ಹತ್ಯೆಗಳು ಈ ಕಾಂಗ್ರೇಸ್ ಸರಕಾರದ ಪ್ರಾಯೋಜತ್ವದ ಕೊಲೆ ಆಗಿದೆ. ಈಗ ಮಂಗಳೂರಿನ ಸುಹಾಸ್ ಶೆಟ್ಟಿಯ ಕೊಲೆಯೂ ಆಗಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದೆ. ಯಾರು ಗೋ ರಕ್ಷಣೆ ಮಾಡುತ್ತಾರೆ, ಯಾರು ಹಿಂದೂ ಸಹೋದರಿಯರ ರಕ್ಷಣೆ ಮಾಡುತ್ತಾರೆ, ಯಾರು ಗಣೇಶೋತ್ಸವ ಮಾಡುತ್ತಾರೆ, ಹಿಂದುತ್ವದ ವಿಚಾರ, ಹಿಂದೂ ಜನ ಜಾಗ್ರತಿ ಯಾರು ಮಾಡುತ್ತಾರೆ ಅಂತಹ ಹಿಂದೂ ಕಾರ್ಯಕರ್ತರ ಮೇಲೆ ಈ ಕಾಂಗ್ರೇಸ್ ಸರ್ಕಾರ ರೌಡಿ ಶೀಟರ್ ಹಾಕಿ ಕಿರುಕುಳ ನೀಡುತ್ತಿದೆ.
ನಾನು ಸರ್ಕಾರಕ್ಕೆ ಒತ್ತಾಯ ಮಾಡುವುದೇನೆಂದರೆ ಇಲ್ಲಿಯವರೆರೂ ಎಷ್ಟು ಮುಸ್ಲಿಂರ ಮೇಲೆ ರೌಡಿ ಶೀಟರ್ ಹಾಕಿದ್ದೀರಿ ಲೆಕ್ಕ ಕೊಡಿ? ಅವರ ಮೇಲೆ ಯಾವುದೇ ಕ್ರಮವಿಲ್ಲ, ಹೀಗಾಗಿ ಇದೊಂದು ಹಿಂದೂ ವಿರೋಧಿ ಸರ್ಕಾರವಾಗಿದೆ.
ಅಭಿವೃದ್ಧಿ ಶೂನ್ಯ ಸರ್ಕಾರ.
ಈ ರಾಜ್ಯ ಕಾಂಗ್ರೇಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ, ಶಾಸಕರಿಗೆ ಅನುದಾನ ಸಿಗುತ್ತಿಲ್ಲ, ಅದರಲ್ಲೂ ಬಿಜೆಪಿ, ಜೆಡಿಎಸ್ ಶಾಸಕರೆಂದರೆ ಮಲತಾಯಿ ಧೋರಣೆ ಅನುಸರಿಸುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲ.
ಎರಡನೇ ಭಾರಿಗೆ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಯಾವುದೇ ಅವರ ಹಿಡಿತಕ್ಕೆ ಸಿಗುತ್ತಿಲ್ಲ, ಅಧಿಕಾರಿಗಳು ಮಾತು ಕೇಳುತ್ತಿಲ್ಲ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಜ್ಯದಲ್ಲಿ ಕೊಲೆ, ಸುಲಿಗೆ, ಕಳ್ಳತನ ನಿರಂತರವಾಗಿ ನಡೆಯುತ್ತಿದೆ. ನಮ್ಮ ರಾಜ್ಯವು ದೇಶದ್ರೋಹಿ ಭಯೋತ್ಪಾದಕರ ಅಡಗು ತಾಣ ಆಗಿದೆ.
ಹೀಗಾಗಿ ಈ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವತಿಯಿಂದ ಜನಾಕ್ರೋಶ ಯಾತ್ರೆ ನಡೆಯುತ್ತಿದೆ.
ಈ ಸಂದರ್ಭದಲ್ಲಿ ವಿಧಾನಸಭಾ ವಿರೋಧ ಪಕ್ಷದ ಉಪ ನಾಯಕ ಶ್ರೀ ಅರವಿಂದ ಬೆಲ್ಲದ, ಶಾಸಕರಾದ ಶ್ರೀ ಮಹೇಶ್ ಟೆಂಗೀನಕಾಯಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಪಿ ರಾಜೀವ್, ರಾಜ್ಯ ಶಿಸ್ತು ಸಮಿತಿ ಸಂಚಾಲಕ ಶ್ರೀ ಲಿಂಗರಾಜು ಪಾಟೀಲ್, ರಾಜ್ಯ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ಮಹೇಂದ್ರ ಕೌತಾಳ, ಮಹಾನಗರ ಜಿಲ್ಲಾಧ್ಯಕ್ಷ ಶ್ರೀ ತಿಪ್ಪಣ್ಣ ಮಜ್ಜಿಗಿ, ಗ್ರಾಮಾಂತರ ಜಿಲ್ಲಾಧ್ಯಕ್ಷ ಶ್ರೀ ನಿಂಗಪ್ಪ ಸುತಗಟ್ಟಿ, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
To Write Comment Please Login